ಒಂದೇ ಒಂದು ಡ್ಯಾನ್ಸ್ ನಿಂದ ಬಾಲಿವುಡ್ ನಲ್ಲಿ ಬಿಗ್ ಆಫರ್ ಪಡೆದ ರಶ್ಮಿಕಾ ಮಂದಣ್ಣ

ಶುಕ್ರವಾರ, 1 ಜುಲೈ 2022 (10:30 IST)
ಮುಂಬೈ: ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ನಲ್ಲೂ ಬೇಡಿಕೆಯ ನಟಿಯಾಗಿದ್ದಾರೆ. ಪ್ರಸ್ತುತ ರಶ್ಮಿಕಾ ರಣಬೀರ್ ಕಪೂರ್ ಜೊತೆಗೆ ಅನಿಮಲ್ ಎನ್ನುವ ಬಾಲಿವುಡ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಈ ಸಿನಿಮಾದಲ್ಲಿ ಅವರಿಗೆ ಅವಕಾಶ ಸಿಕ್ಕಲು ಕಾರಣ ಟಾಲಿವುಡ್ ನ ಪುಷ್ಪ ಸಿನಿಮಾದ ಶ್ರೀವಲ್ಲಿ ಪಾತ್ರ. ಈ ಸಿನಿಮಾದ ಹಾಡಿನಲ್ಲಿ ರಶ್ಮಿಕಾ ಹಾಕಿದ್ದ ಸ್ಟೆಪ್ಸ್ ಟ್ರೆಂಡ್ ಆಗಿತ್ತು. ಈ ಸಿನಿಮಾದ ಹಾಡಿಗೆ ರಶ್ಮಿಕಾ ಹೆಜ್ಜೆ ಹಾಕಿದ್ದ ನೋಡಿ ಇಂಪ್ರೆಸ್ ಆದ ನಿರ್ದೇಶಕ ಸಂದೀಪ್ ರೆಡ್ಡಿ ತಮ್ಮ ಅನಿಮಲ್ ಸಿನಿಮಾಗೆ ರಶ್ಮಿಕಾರನ್ನೇ ನಾಯಕಿಯಾಗಿ ಆಯ್ಕೆ ಮಾಡಿದರಂತೆ.

ಹೀಗಾಗಿ ಕೇವಲ ಒಂದು ಹಾಡಿನಿಂದ ರಶ್ಮಿಕಾಗೆ ಬಾಲಿವುಡ್ ನಲ್ಲಿ ಭರ್ಜರಿ ಆಫರ್ ಸಿಕ್ಕಿತು. ಸದ್ಯಕ್ಕೆ ಈ ಸಿನಿಮಾ ಚಿತ್ರೀಕರಣ ಹಂತದಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ