ಗೋಲ್ಡನ್ ಸ್ಟಾರ್ ಗಣೇಶ್ ಬರ್ತ್ ಡೇಗೆ ರೊಮ್ಯಾಂಟಿಕ್ ಹಾಡಿನ ಉಡುಗೊರೆ
ಈಗಾಗಲೇ ತಾನು ಈ ದಿನ ಮನೆಯಲ್ಲಿರಲ್ಲ. ಮನೆ ಹತ್ರ ಬರಬೇಡಿ ಎಂದು ಗಣೇಶ್ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದರು.
ಆದರೆ ಅವರ ಅಭಿಮಾನಿಗಳಿಗೆ ನಿರಾಸೆಯಾಗದಿರಲು ಗಾಳಿಪಟ 2 ಸಿನಿಮಾ ತಂಡ ವಿಶೇಷ ಉಡುಗೊರೆ ಕೊಡಲು ಮುಂದಾಗಿದೆ. ಗಾಳಿಪಟ 2 ಸಿನಿಮಾದ ನಾನಾಡದ ಮಾತೆಲ್ಲವ ಎಂಬ ರೊಮ್ಯಾಂಟಿಕ್ ಹಾಡನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಇದು ಗೋಲ್ಡನ್ ಅಭಿಮಾನಿಗಳಿಗೆ ಸಖತ್ ಸುದ್ದಿಯಾಗಲಿದೆ.