ಅಮಿತಾಭ್ ಬಚ್ಚನ್ ಜೊತೆ ಸಿನಿಮಾ ಮಾಡಲಿರುವ ರಶ್ಮಿಕಾ ಮಂದಣ್ಣ

ಸೋಮವಾರ, 28 ಡಿಸೆಂಬರ್ 2020 (12:30 IST)
ಬೆಂಗಳೂರು: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ನಲ್ಲಿ ಬಂಪರ್ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ವಿಕಾಸ್ ಬೆಹ್ಲ್ ನಿರ್ದೇಶನದ ಸಿನಿಮಾದಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ಜೊತೆಗೆ ರಶ್ಮಿಕಾ ಅಭಿನಯಿಸಲಿದ್ದಾರೆ.


‘ಡೆಡ್ಲಿ’ ಎನ್ನುವ ಸಿನಿಮಾದಲ್ಲಿ ರಶ್ಮಿಕಾ, ಅಮಿತಾಭ್ ಅವರ ಮಗಳ ಪಾತ್ರ ಮಾಡಲಿದ್ದಾರೆ ಎನ್ನಲಾಗಿದೆ. ಇದು ಪಕ್ಕಾ ಆದರೆ ರಶ್ಮಿಕಾರ ಎರಡನೇ ಬಾಲಿವುಡ್ ಸಿನಿಮಾ ಇದಾಗಲಿದೆ. ಮುಂದಿನ ವರ್ಷ ಸಿನಿಮಾ ಸೆಟ್ಟೇರಲಿದೆ. ಈಗಾಗಲೇ ಕನ್ನಡ, ತೆಲುಗಿನಲ್ಲಿ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ರಶ್ಮಿಕಾ ಬಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ