ಹೈದರಾಬಾದ್ : ನಟಿ ರಶ್ಮಿಕಾ ಮಂದಣ್ಣ ಗೀತಾ ಗೋವಿಂದಂ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಅವರು ಸರಿಲೆರು ನಿಕೆವೇರು, ಡಿಯರ್ ಕಾಮ್ರೇಡ್, ಬಿಷ್ಮಾ ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳ ಮನಗೆದ್ದಿದ್ದಾರೆ.
ನಟಿ ರಶ್ಮಿಕಾ ಮಂದಣ್ನ ನಟನೆಯಿಂದ ಮಾತ್ರವಲ್ಲ ಸೌಂದರ್ಯದಲ್ಲೂ ಅಭಿಮಾನಿಗಳ ನೆಚ್ಚಿನ ನಟಿಯಾಗಿದ್ದಾರೆ. ಹಾಗಾಗಿ ಅವರ ಸೌಂದರ್ಯದ ರಹಸ್ಯ ತಿಳಿಯುವ ಆಸೆ ಹಲವರಲ್ಲಿದೆ. ಇದೀಗ ಅವರು ತಮ್ಮ ಸೌಮದರ್ಯದ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.
ಅವರು ಪ್ರತಿದಿನ ಬೆಳಿಗ್ಗೆ ಎದ್ದಾಗ ಆಪಲ್ ಸೈಡರ್ ವಿನೆಗರ್ ನ್ನು ಒಂದು ಗ್ಲಾಸ್ ನೀರಿಗೆ ಬೆರೆಸಿ ಕುಡಿಯುತ್ತಾರಂತೆ.
ಒಂದು ಚಿಕ್ಕ ಬಟ್ಟಲಿನಲ್ಲಿ ವಿವಿಧ ಹಣ್ಣುಗಳನ್ನು , ಬೇಯಿಸಿದ ತರಕಾರಿಗಳನ್ನು ಸೇವಿಸುತ್ತಾರಂತೆ. ಹಾಗೇ ಪ್ರತಿದಿನ ಬೇಯಿಸಿದ ಕೋಳಿ ಮೊಟ್ಟೆಗಳನ್ನು ಸೇವಿಸುತ್ತಾರಂತೆ. ಐಸ್ ಕ್ರೀಂ ಮತ್ತು ಚಾಕೋಲೆಟ್ ನಿಂದ ದೂರವಿರುತ್ತಾರಂತೆ. ಹಾಗೇ ಆರೋಗ್ಯಕರವಾದ ಆಹಾರ, ಶಾಂತಿ ಸಂತೋಷದಿಂದ ಇದ್ದರೆ ನಿಮ್ಮ ಸೌಂದರ್ಯ ಇಮ್ಮಡಿಗೊಳ್ಳುತ್ತದೆ ಎಂದು ಅವರು ತಿಳಿಸಿದ್ದಾರೆ.