ರಾಕ್ ಆನ್ 2 ಚಿತ್ರದ ಮೊದಲ ಪೋಸ್ಟರ್ ರಿಲೀಸ್

ಶುಕ್ರವಾರ, 2 ಸೆಪ್ಟಂಬರ್ 2016 (17:00 IST)
ಶ್ರದ್ಧಾ ಕಪೂರ್  ಬಾಲಿವುಡ್ ನಲ್ಲಿರುವ ಪ್ರತಿಭಾವಂತ ಕಲಾವಿದೆ. ಅಪ್ಪ ಶಕ್ತಿ ಕಪೂರ್ ಅವರಂತೆ ತಮ್ಮ ಪ್ರತಿಭೆಯನ್ನು ಮಾನದಂಡ ಮಾಡಿಕೊಂಡಿರುವ ಚೆಲುವೆ .ಆಶಿಕಿ 2 ಮೂಲಕ ಬಣ್ಣ ಹಚ್ಚಿದ ಈ ಚೆಲುವೆ ಬಳಿಕ ನಟಿಸಿದ ಚಿತ್ರಗಳಲ್ಲಿನ ಪಾತ್ರಗಳು ಜನಮನ ಸೆಳೆದಿದ್ದವು. ಆಕೆಯು ನಟನೆಯ ಜೊತೆಗೆ ಪ್ರೀತಿಯ ವಿಷಯದಲ್ಲೂ ಸಹಿತ ಸುದ್ದಿ ಮಾಡಿದ್ದರು.ಇದೀಗ ಶ್ರದ್ಧಾ ಮುಂಬರುವ ರಾಕ್ ಆನ್ 2 ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ.




ಈ ಬಗ್ಗೆ ಶ್ರದ್ಧಾ ಕಪೂರ್ ಹಾಗೂ ಫರ್ಹಾ ಅಖ್ತರ್ ಟ್ವಿಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ರಾಕ್ ಆನ್ 2 ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರ ನವೆಂಬರ್‌ಗೆ ರಿಲೀಸ್ ಆಗುವ ಸಾಧ್ಯತೆ ಇದೆ. ರಿತೇಶ್ ಸಿಧ್ವಾನಿ ನಿರ್ಮಾಣದ 2008ರಲ್ಲಿ ರಾಕ್ ಆನ್ ಚಿತ್ರದ ಮುಂದುವರಿದ ಭಾಗವಾದ ಈ ಚಿತ್ರ ಮೇಘಾಲಯದ ರಾಜಧಾನಿಯಾದ ಶಿಲ್ಲಾಂಗ್‌ನಲ್ಲಿ ಚಿತ್ರೀಕರಣಗೊಳ್ಳಲಿದೆ.

ಶ್ರದ್ಧಾ ಕಪೂರ್ ಅಭಿನಯದ ರಾಕ್ ಆನ್ 2 ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಆಗುತ್ತಿದೆ. ಸುಜ್ಜಾತ್ ಸೌದಾಗರ್ ಚಿತ್ರವನ್ನು ನಿರ್ದೇಶನ ಮಾಡಿದ್ದು, ಚಿತ್ರವು ವಿಭಿನ್ನವಾದ ಕಥೆ ಹೊಂದಿದ್ದು, ಸ್ನೇಹದ ಬಗ್ಗೆ ತೋರಿಸಲಾಗಿದೆ. ಈ ಚಿತ್ರದಲ್ಲಿ ಮ್ಯೂಸಿಕ್ ಕೂಡ ವಿಭಿನ್ನವಾಗಿ ಮಾಡಲಾಗುತ್ತಿದೆ.ಈ ಚಿತ್ರದಲ್ಲಿ ನಟರು ಯಾರೆಲ್ಲಾ ಇದ್ದಾರೆ ಎಂಬುದರ ಬಗ್ಗೆ ಪೋಸ್ಟರ್ ನಲ್ಲಿ ಮೂಡಿ ಬಂದಿದೆ. 
 
ಪ್ರಣಯ ಅದೂ ಇದೂ ಎಂದು ಮಾಧ್ಯಮಗಳ ಕಣ್ಣಿಗೆ ಬೀಳದೆ ಇದ್ದರೇ ಜನಕ್ಕೆ ಹೆಚ್ಚು ಗೊತ್ತಾಗಲು  ಸಾಧ್ಯವಿಲ್ಲ ಎನ್ನುವ ಸತ್ಯ ಅರಿತಿರುವ ಈ ತಾರೆ ಯಾವುದೋ ಒಂದು ಸ್ವಲ್ಪ ಪ್ರಮಾಣದಲ್ಲಿ ಮಾಧ್ಯಮಗಳ ಮುಂದೆ ಬಣ್ಣ ಬಣ್ಣವಾಗಿ ಬರುತ್ತಿದ್ದಾರೆ. ಜಾಹೀರಾತು ಲೋಕದಲ್ಲಿ ಸಹ ಪಾದಾರ್ಪಣೆ ಮಾಡಿರುವ ಶ್ರದ್ಧಾ, ಹೈದರ್ ಚಿತ್ರದಲ್ಲಿನ ನಟನೆ ಎಲ್ಲರ ಗಮನ ಸೆಳೆದಿತ್ತು. ಈಗ ರಾಕ್ ಆನ್ 2 ಚಿತ್ರದಲ್ಲಿ ಶ್ರದ್ಧಾ ಹಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

 
 

ವೆಬ್ದುನಿಯಾವನ್ನು ಓದಿ