ಮಾವರಾ ಜೊತೆ ಡೇಟಿಂಗ್ ನಡೆಸುತ್ತಿಲ್ಲ, ಸುಳ್ಳು ವದಂತಿ ಎಂದ ಸೂರಜ್ ಪಾಚೋಲಿ

ಶನಿವಾರ, 27 ಫೆಬ್ರವರಿ 2016 (19:38 IST)
ನಟ ಸುರಜ್ ಪಾಂಚೋಲಿಗೆ ಡೇಟಿಂಗ್ ವಿಷಯ ತುಂಬಾ ತಲೆ ಬಿಸಿ ಮಾಡಿದೆಯಂತೆ. ಯಾಕೆಂದ್ರೆ ಸುರಜ್ ಡೇಟಿಂಗ್ ವಿಷಯದಲ್ಲಿ ಹೆಚ್ಚು ಹೆಚ್ಚಾಗಿ ಚರ್ಚಿತರಾಗುತ್ತಿದ್ದಾರೆ. ಇದು ಅವರಿಗೆ ಅಸಮಾಧಾನ ತಂದೊಡ್ಡಿದೆಯಂತೆ.
ವರದಿಗಳ ಪ್ರಕಾರ ಸುರಜ್ ಪಾಂಚೋಲಿ 'ಸನಮ್ ತೆರಿ ಕಸಮ್' ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಸದ್ಯ ಸುರಜ್ ಪಾಕ್ ನಟಿ ಮಾವರಾ ಜೊತೆ ಡೇಟಿಂಗ್‌ನಲ್ಲಿದ್ದಾರೆ ಎಂಬ ವದಂತಿ ಕೇಳಿ ಬರುತ್ತಿದೆ. 
 
ಈ ಬಗ್ಗೆ ಟ್ವಿಟರ್‌ನಲ್ಲಿ ಹೇಳಿಕೊಂಡಿರುವ ಪಾಂಚೋಲಿ, ಡೇಟಿಂಗ್ ವಿಷಯವನ್ನು ಅಲ್ಲಗಳೆದಿದ್ದಾರೆ. ಮಾವರ್ ಮತ್ತು  ನನ್ನ ಮಧ್ಯೆ ಡೇಟಿಂಗ್ ವಿಷ್ಯ ಸುಳ್ಳು ಎಂದಿದ್ದಾರೆ. ನನಗಂತೂ ಗೊತ್ತಿಲ್ಲ ಕೆಲ ಜನರು ಯಾಕೆ ಈ ರೀತಿ ಯೋಚಿಸುತ್ತಾರೆ ಅಂತ ಸೂರಜ್ ಹೇಳಿದ್ದಾರೆ.

ಇನ್ನೂ ಸೂರಜ್ ಪಾಂಚೋಲಿ 'ಜಿಎಫ್ ಬಿಎಫ್' ಸಂಗೀತ ವಿಡಿಯೋದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಜೊತೆ ಕಾಣಿಸಿಕೊಂಡಿದ್ದರು.

ವೆಬ್ದುನಿಯಾವನ್ನು ಓದಿ