ರನ್ ಆಂಟೋನಿ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಅವರು ಜನಕ್ ಜನಕ್ ಅನ್ನೋ ಮೆಲೋಡಿಯಸ್ ಸಾಂಗ್ ನ್ನು ಹಾಡಿದ್ದಾರೆ. ಈಗಾಗಲೇ ಅಪ್ಪು ಹಾಡಿರುವ ಹಾಡು ಯೂ ಟ್ಯೂನ್ ನಲ್ಲಿ ಹರಿದಾಡುತ್ತಿದ್ದು ಅಭಿಮಾನಿಗಳಿಗೆ ಸಾಂಗ್ ತುಂಬಾನೇ ಇಷ್ಟವಾಗಿದೆ, ಅಂದ್ಹಾಗೆ ಈ ಹಾಡನ್ನು ವಿನಯ್ ಗಾಗಿ ತುಂಬಾನೇ ಪ್ರೀತಿಯಿಂದ ಹಾಡಿದ್ದಾರಂತೆ
ಇನ್ನು ಸಿನಿಮಾಗೆ ನಾಯಕಿಯರಾಗಿ ರುಕ್ಸಾನಾ ಹಾಗೂ ಸುಷ್ಮಿತಾ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ವಿನಯ್ ಸಹೋದರ ಗುರುರಾಜ್ ಕುಮಾರ್ ನಿರ್ಮಾಪಕರಾಗಿದ್ದಾರೆ. ಅಂದ್ಹಾಗೆ ಈ ಸಿನಿಮಾವನ್ನು ರಘು ಶಾಸ್ತ್ರಿ ನಿರ್ದೇಶನ ಮಾಡುತ್ತಿದ್ದಾರೆ. ಮನೋಹರ್ ಜೋಷಿ ಛಾಯಾಗ್ರಹಣ ಸಿನಿಮಾಕ್ಕಿದ್ದು, ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸುತ್ತಿದ್ದಾರೆ.