ಸಲೀಂ ಖಾನ್ ಹೊಗಳಿಕೆ ಸಾಮಾನ್ಯದ್ದಲ್ಲ ಎಂದ ಅಜಯ್ ದೇವಗನ್
ಮುಂಬೈ: ಬಾಲಿವುಡ್ ನ ಹಿರಿಯ ಸಿನಿಮಾ ನಿರ್ದೇಶಕ, ಸಲೀಂ ಖಾನ್ ಇತ್ತೀಚೆಗೆ ಅಜಯ್ ದೇವಗನ್ ಅವರ ಶಿವಾಯ್ ಚಿತ್ರವನ್ನು ನೋಡಿ ಹೊಗಳಿದ್ದರು.
ಸಲೀಂ ಖಾನ್ ಸಲ್ಮಾನ್ ಖಾನ್ ಅವರ ತಂದೆ. ಚಿತ್ರ ಚೆನ್ನಾಗಿದೆ ಎಂದು ಸಲೀಂ ಹೊಗಳಿದ್ದರು. ಇದು ನಿರ್ದೇಶಕ ಅಜಯ್ ಕಿವಿಗೂ ಬಿದ್ದಿದೆ. ಅಂತಹ ಹಿರಿಯ ನಿರ್ದೇಶಕನ ಹೊಗಳಿಕೆಯಿಂದ ಅಜಯ್ ಉಬ್ಬಿ ಹೋಗಿದ್ದಾರೆ. ಚಿತ್ರರಂಗದಲ್ಲಿ ಸಲೀಂ ಖಾನ್ ಕೈಯಲ್ಲಿ ಹೊಗಳಿಸಿಕೊಳ್ಳುವುದು ಸಾಮಾನ್ಯ ಮಾತಲ್ಲ ಎಂದು ಅಜಯ್ ಪ್ರತಿಕ್ರಿಯಿಸಿದ್ದಾರೆ.
ಅಲ್ಲದೆ, ತನಗೆ ವಿಶ್ ಮಾಡಿದ ಸಲೀಂ ಗೆ ಟ್ವಿಟರ್ ಪೇಜ್ ಮೂಲಕ ಅಜಯ್ ಧನ್ಯವಾದ ತಿಳಿಸಿದ್ದಾರೆ. “ಧನ್ಯವಾದಗಳು ಸಲೀಂ ಅಂಕಲ್. ನಿಮ್ಮ ಹೊಗಳಿಕೆ ನಮಗೆ ವಿಶೇಷ. ಚಿತ್ರ ನೋಡಿ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು” ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.