ಸಲ್ಮಾನ್ ಖಾನ್ 40 ಅಂತಸ್ತಿನಿಂದ ಜಿಗಿದದ್ದು ಯಾಕೇಂದ್ರೆ ....

ಮಂಗಳವಾರ, 22 ಏಪ್ರಿಲ್ 2014 (09:54 IST)
ಸಲ್ಮಾನ್ ಖಾನ್ ಕಂಡ್ರೆ ಆತನ ಅಭಿಮಾನಿಗಳಿಗೆ ಪಂಚಪ್ರಾಣ. ತನ್ನ ಅಭಿಮಾನಿಗಳನ್ನು ಮೆಚ್ಚಿಸಲು ಆತ ಸದಾ ಕಸರತ್ತು ಮಾಡ್ತಾನೆ ಇರ್ತಾರೆ. ಅದರಲ್ಲಿ ಒಂದು ಭಾಗವಾಗಿ ಸಲ್ಲು 40 ಅಡಿ ಅಂತಸ್ತಿನಿಂದ ಜಿಗಿದಿದ್ದಾರೆ.ಅದೂ ಬಂಗಿ ಜಂಪ್ ಮಾಡಿ ಜಿಗಿದಿದ್ದಾರೆ ತಲೆ ಕೆಳಗೆ ಮಾಡಿಕೊಂಡು .
 
ಇದೆಲ್ಲಾ ಯಾಕೆ ಇಂತಹ ಕಿಕ್ ಹೊಡೆಯುವ ಕೆಲಸ ಯಾಕೆ ಮಾಡ್ತಾ ಇದ್ದಾರೆ ಅಂದ್ರೆ ತೆಲುಗು ರೀಮೇಕ್ ಚಿತ್ರ ಕಿಕ್ ಹಿಂದಿಯಲ್ಲಿ ಚಿತ್ರೀಕರಣ ಮಾಡಿಸಿಕೊಳ್ಳುತ್ತಿದೆ. ಅದರಲ್ಲಿ ಸಲ್ಲು ಮ್ಯಾನ್ ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ ಸಂಬಂಧಪಟ್ಟಂತೆ ಸಲ್ಲು ಪೋಲೆಂಡ್ ನಲ್ಲಿ ಇರುವ ಅತ್ಯಂತ ಎತ್ತರವಾದ ಪ್ಯಾಲೇಸ್ ಆಫ್ ಕಲ್ಚರ್  ಅಂಡ್ ಸೈನ್ಸ್  ಎನ್ನುವ ಭವನದ  ಮೇಲಿಂದ ಸಲ್ಮಾನ್ ಬಂಗಿ ಜಂಪ್ ಮಾಡಿದ ಸೀನ್ ಶೂಟ್ ಮಾಡಲಾಯಿತು. ಆ ದೃಶ್ಯದಲ್ಲಿ ಡ್ಯೂಪ್ ಬೇಡ ನಾನೇ ನಟಿಸುತ್ತೇನೆ ಎಂದು ಹೇಳಿ ಮಾಡಿ ತೋರಿಸಿದ್ದಾರೆ ಸಲ್ಮಾನ್. 
 
ಲಕ್ಷಾಂತರ ಅಭಿಮಾನಿಗಳಿಗೆ ತಾನು ಫಿಟ್ ಮತ್ತು ಪರ್ಫೆಕ್ಟ್ ಎನ್ನುವುದನ್ನು   ಸಾಬೀತು ಮಾಡಿದ್ದಾರೆ. ಈ ಚಿತ್ರಕ್ಕೆ  ಸುಮಾರು ಐದು ಗಂಟೆಗಳ ಕಾಲ ಈ ದೃಶ್ಯದ ಚಿತ್ರೀಕರಣ ನಡೆಯಿತಂತೆ. ಸಲ್ಮಾನ್ ಜೊತೆ ಜಕ್ವಿಲಿನ್ ಫರ್ನಾಂಡೀಸ್ ಹೀರೋಯಿನ್ ಆಗಿದ್ದಾಳೆ. 

ವೆಬ್ದುನಿಯಾವನ್ನು ಓದಿ