ಸಲ್ಮಾನ್ ಹಿಟ್ ಅಂಡ್ ರನ್ ಕೇಸ್: ಮೇ 6ರಕ್ಕೆ ಅಂತಿಮ ತೀರ್ಪು

ಮಂಗಳವಾರ, 21 ಏಪ್ರಿಲ್ 2015 (12:31 IST)
ಸಲ್ಮಾನ್ ಖಾನ್ ವಿರುದ್ಧದ ಹಿಟ್ ಅಂಡ್ ರನ್ ಕೇಸ್‌ಗೆ ಸಂಬಂಧಿಸಿದಂತೆ ಮೇ 6 ರಂದು ತೀರ್ಪು ಪ್ರಕಟಿಸುವುದಾಗಿ ಮುಂಬೈ ಸೆಷನ್ಸ್ ಕೋರ್ಟ್ ಹೇಳಿದೆ. 

ಮೇ 5ಕ್ಕೆ ತೀರ್ಪು ಪ್ರಕಟಿಸುವುದಾಗಿ ನ್ಯಾಯಮೂರ್ತಿಗಳು ಹೇಳಿದರಾದರೂ ಸಲ್ಮಾನ್ ಆ ದಿನ ತಮಗೆ ಕೋರ್ಟ್‌ಗೆ ಹಾಜರಾಗಲು ಸಾಧ್ಯವಿಲ್ಲವೆಂದು ಮನವಿ ಮಾಡಿಕೊಂಡರು. ಆದ್ದರಿಂದ ಮೇ 6ಕ್ಕೆ ತೀರ್ಪು ಪ್ರಕಟಿಸುವುದಾಗಿ ನ್ಯಾಯಮೂರ್ತಿ ದೇಶಪಾಂಡೆ  ಹೇಳಿದ್ದಾರೆ. 
 
ಸಲ್ಮಾನ್ ಚಲಾಯಿಸುತ್ತಿದ್ದರು ಎನ್ನಲಾದ ಕಾರ್ ಹರಿದು ಓರ್ವ ಮೃತಪಟ್ಟು, 4 ಜನ ಗಾಯಗೊಂಡ ಘಟನೆ 2002 ಸಪ್ಟೆಂಬರ್ 28 ರಂದು ನಡೆದಿತ್ತು. 
 
ಕಳೆದ 13 ವರ್ಷಗಳಿಂದ ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದು ಅಂದಿನಿಂದಲೂ ಅನೇಕ ಕುತೂಹಲಕಾರಿ ತಿರುವುಗಳನ್ನು ಪಡೆಯುತ್ತ ಸಾಗಿದೆ. ಕಳೆದ ತಿಂಗಳು ಸಲ್ಮಾನ್ ಕಾರ್ ಚಾಲಕ ತಾನೇ ಕಾರ್ ಚಲಾಯಿಸುತ್ತಿದ್ದೆ ಎಂದು ಹೇಳಿ ಪ್ರಕರಣಕ್ಕೆ ಮತ್ತೊಂದು ಹೊಸ ತಿರುವು ನೀಡಿದ್ದರು. ಆರೋಪ ಸಾಬೀತಾದರೆ ಖಾನ್ ಅವರಿಗೆ 10 ವರ್ಷಗಳ ಕಾಲ ಶಿಕ್ಷೆಯಾಗುವು ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. 
 
ಅಪಘಾತದ ಪ್ರತ್ಯಕ್ಯದರ್ಶಿ ರವೀಂದ್ರ ಪಾಟೀಲ್ ಈಗ ಬದುಕಿಲ್ಲವಾದ್ದರಿಂದ ಸಲ್ಮಾನ್ ಪರ ವಕೀಲರು ಕೇಸ್ ತಮ್ಮ ಕಡೆಯಾಗುವಂತೆ ಮಾಡಿಕೊಳ್ಳುವಲ್ಲಿ ಈ ಅಂಶವನ್ನು ಇಟ್ಟುಕೊಂಡು ವಾದಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ