ನಾಲ್ಕೇ ದಿನದಲ್ಲಿ ಬರೋಬ್ಬರಿ 142 ಕೋಟಿ ರೂಪಾಯಿ ಕಲೆಕ್ಷನ್ ಮಾಡಾಡಿದ ಸುಲ್ತಾನ್ ಸಿನಿಮಾ

ಸೋಮವಾರ, 11 ಜುಲೈ 2016 (08:25 IST)
ಸಲ್ಮಾನ್ ಖಾನ್ ಅಭಿನಯ ಸುಲ್ತಾನ್ ಸಿನಿಮಾ ರಿಲೀಸ್ ಗೂ ಮುನ್ನವೇ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಸೂಚನೆಯನ್ನು ನೀಡಿತ್ತು. ಇದೀಗ ಅದು ನಿಜವಾಗಿದೆ. ಸಲ್ಮಾನ್ ಖಾನ್ ಅವರ ಅಭಿನಯಯಕ್ಕೆ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದ್ದರೆ ಇತ್ತ ಸುಲ್ತಾನ್ ಬಾಕ್ಸಾಫೀಸ್ ನಲ್ಲೂ ತನ್ನ ನಾಗಾಲೋಟವನ್ನು ಮುಂದುವರೆಸಿದೆ.

ಹೌದು.... ಈದ್ ಹಬ್ಬದಂದು ರಿಲೀಸ್ ಆದ ಸುಲ್ತಾನ್ ಸಿನಿಮಾ ಬಿಡುಗಡೆಯಾದ ನಾಲ್ಕೇ ದಿನದಲ್ಲಿ ಬರೋಬ್ಬರಿ 142 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಜುಲೈ ಆರರಂದು ಸಿನಿಮಾ ರಿಲೀಸ್ ಆದ ದಿನದಂದೇ ಸಿನಿಮಾ ಬರೋಬ್ಬರಿ 36 ಕೋಟಿ 54 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿತ್ತು. ಮರುದಿನ ಮೂವತ್ತೇಳು ಕೋಟಿ  ರೂಪಾಯಿ ಕಲೆಕ್ಷನ್ ಮಾಡಿತ್ತು. ಮೂರನೇ ದಿನ ಮೂವತ್ತು ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇನ್ನು ಶನಿವಾರ ಬರೋಬ್ಬರಿ 37 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.  ವಾರದ ಮಧ್ಯಭಾಗದಲ್ಲೇ ಇಷ್ಟೊಂದು ಕಲೆಕ್ಷನ್ ಮಾಡಿರುವ ಸುಲ್ತಾನ್ ಸಿನಿಮಾ ವಾರಾಂತ್ಯಕ್ಕೆ ಇನ್ನೆಷ್ಟು ಕಲೆಕ್ಷನ್ ಮಾಡಬಹುದು. ಹಾಗಾಗಿ ಸುಲ್ತಾನ್ ಇನ್ನಷ್ಟು ಕಲೆಕ್ಷನ್ ಮಾಡೋದು ಪಕ್ಕಾ ಆಗಿದೆ.
 
ಅಂದ್ಹಾಗೆ ಸುಲ್ತಾನ್ ಸಿನಿಮಾ ಚಿತ್ರಮಂದಿರಕ್ಕೆ ಬರೋ ಮೋದಲೇ ಅದು ಆನ್ ಲೈನ್ ನಲ್ಲಿ ಲೀಕ್ ಆಗಿತ್ತು. ಹಾಗಾಗಿ ಇದು ಸಿನಿಮಾ ತಂಡಕ್ಕೆ ಭರ್ಜರಿ ಹೊಡೆತ ನೀಡುತ್ತೆ ಅಂತಾ ಸಿನಿಮಾ ತಂಡ ಲೆಕ್ಕಾಚಾರದಲ್ಲಿತ್ತು.ಆದ್ರೆ ಬಾಕ್ಸಾಫೀಸ್ ಕಲೆಕ್ಷನ್ ಅದೆಲ್ಲದಕ್ಕೂ ಉತ್ತರ ನೀಡಿದೆ. ಇನ್ನು ಸುಲ್ತಾನ್ ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವ ಆದಿತ್ಯಾ ಛೋಪ್ರಾ ಅವರು ಸುಲ್ತಾನ -2 ಮಾಡುವ ತಯಾರಿಯಲ್ಲಿದ್ದಾರಂತೆ.

ವೆಬ್ದುನಿಯಾವನ್ನು ಓದಿ