ಸಲ್ಮಾನ್ ಅವರ ಈ ರೀತಿಯ ವಿಶ್ ಗೆ ಕತ್ರಿನಾ ಕೂಡಾ ನಯವಾಗಿಯೇ ಸ್ಪಂದಿಸಿ ಮುಗುಳುನಗೆ ಬೀರಿದರು. ಇತ್ತೀಚೆಗಷ್ಟೆ ನಡೆದ ಐಫಾ 2017 ಪ್ರಶಸ್ತಿ ಕಾರ್ಯಕ್ರಮದಲ್ಲಿ ಕತ್ರಿನಾ ಹಾಗೂ ಸಲ್ಮಾನ್ ಖಾನ್ ಒಟ್ಟಾಗಿ ಕಾಣಿಸಿಕೊಂಡು ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದ್ದರು. ಹಾಗಾಗಿ ಈ ತಾರಾ ಜೋಡಿ ನಡುವೆ ಮತ್ತೆ ಪ್ರೇಮಾಂಕುರವಾಗಿದೆಯೇ ಎಂಬ ಸುದ್ದಿ ಈಗ ಎಲ್ಲೆಡೆ ಹರಿದಾಡುತ್ತಿದೆ.