ಪ್ರಭುದೇವ, ಕಿಚ್ಚ ಸುದೀಪ್ ಜತೆ ಡ್ಯಾನ್ಸ್ ಮಾಡಿ ಟ್ರೋಲ್ ಗೊಳಗಾದ ಸಲ್ಮಾನ್ ಖಾನ್

ಬುಧವಾರ, 10 ಜುಲೈ 2019 (08:35 IST)
ಮುಂಬೈ: ಸಲ್ಮಾನ್ ಖಾನ್ ಜತೆಗೆ ಕಿಚ್ಚ ಸುದೀಪ್ ದಬಾಂಗ್ 3 ಸಿನಿಮಾದಲ್ಲಿ ನಟಿಸುತ್ತಿರುವ ಸುದ್ದಿ ಗೊತ್ತೇ ಇದೆ. ಈ ಸಿನಿಮಾದ ಶೂಟಿಂಗ್ ವೇಳೆ ಚಿತ್ರದ ನಿರ್ದೇಶಕರೂ ಆಗಿರುವ ಡ್ಯಾನ್ಸಿಂಗ್ ಸ್ಟಾರ್  ಪ್ರಭುದೇವ ತಮಾಷೆಗಾಗಿ ನೃತ್ಯ ಹೇಳಿಕೊಡುತ್ತಿರುವ ವಿಡಿಯೋ ಒಂದು ಈಗ ವೈರಲ್ ಆಗಿದೆ.


ಕಿಚ್ಚ ಸುದೀಪ್, ಸಲ್ಮಾನ್ ಖಾನ್ ಮತ್ತು ನಿರ್ಮಾಪಕ ಸಾಜಿದ್ ಗೆ ಪ್ರಭುದೇವ ‘ಊರ್ವಶಿ’ ಹಾಡಿಗೆ ನೃತ್ಯ ಹೇಳಿಕೊಡುತ್ತಿರುವ ತಮಾಷೆಯ ವಿಡಿಯೋವನ್ನು ಸಲ್ಮಾನ್ ತಮ್ಮ ಇನ್ ಸ್ಟಾಗ್ರಾಂ ಮತ್ತು ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ.  ಈ ವಿಡಿಯೋ ನೋಡಿದ ಟ್ವಿಟರಿಗರು ಈಗ ಸಲ್ಮಾನ್ ರನ್ನು ಟ್ರೋಲ್ ಮಾಡಿದ್ದಾರೆ.

ಸಲ್ಮಾನ್ ಖಾನ್ ಮೇಲಿನ ಅಪರಾಧ ಪ್ರಕರಣಗಳನ್ನು ಉಲ್ಲೇಖಿಸಿ ಅಭಿಮಾನಿಗಳು ಲೇವಡಿ ಮಾಡಿದ್ದಾರೆ. ಜೈಲಿನಲ್ಲಿರಬೇಕಾಗಿದ್ದ ವ್ಯಕ್ತಿ ಇಲ್ಲಿ ಡ್ಯಾನ್ಸ್ ಮಾಡಿಕೊಂಡು ಮಜಾ ಮಾಡುತ್ತಿದ್ದಾನೆ ಎಂದು ಕಿಡಿ ಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ