ಮದುವೆ ಆದ ಬಳಿಕವು ಚಿತ್ರಗಳಲ್ಲಿ ನಟಿಸಲಿರುವ ನಟಿ ಸಮಂತಾ

ಶನಿವಾರ, 10 ಸೆಪ್ಟಂಬರ್ 2016 (17:26 IST)
ನಟಿ ಸಮಂತಾ ಮದುವೆ ಆದ ಮೇಲೆ ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಾರೆ ಎಂದು ಹೇಳಲಾಗುತ್ತಿತ್ತು. ಆದ್ರೆ ಸಮಂತಾ ಆಪ್ತರ ಪ್ರಕಾರ ಮದುವೆ ಆದ ಮೇಲೂ ಚಿತ್ರಗಳಲ್ಲಿ ನಟಿಸಲಿದ್ದಾರಂತೆ. ತೆಲಗು ನಟ ನಾಗ ಚೈತನ್ಯಾ ಜತೆಗೆ ಶೀಘ್ರದಲ್ಲೇ ಸಪ್ತಪದಿ ತುಳಿಯಲಿದ್ದಾರೆ. 

ಅಂದಹಾಗೆ ಶೀಘ್ರದಲ್ಲೇ ನಟಿ ಸಮಂತಾ ಹಾಗೂ ನಾಗ ಚೈತನ್ಯ ಮದುವೆ ಕುರಿತು ನಟ ನಾಗಾರ್ಜುನ್ ಘೋಷಣೆ ಮಾಡಲಿದ್ದಾರೆ. ಸಮಂತಾ ಚಿತ್ರಗಳಲ್ಲಿ ನಟಿಸಲ್ಲ, ಅವರು ಚಿತ್ರರಂಗಕ್ಕೆ ಗುಡ್ ಬೈ ಹೇಳ್ತಾರೆ ಎನ್ನಲಾಗುತ್ತಿತ್ತು. ಆದ್ರೆ ಇದೆಲ್ಲಾ ವದಂತಿಗಳಿಗೆ ಸುಳ್ಳು ಎನ್ನಲಾಗುತ್ತಿದೆ.

ನಟಿ ಸಮಂತಾ ರೂಟ್ ಪ್ರಭು ಟ್ವೀಟ್ ನೋಡಿದ್ರೆ ಆಕೆ ಮದುವೆಯಾದ ಬಳಿಕವು ಆ್ಯಕ್ಟಿಂಗ್ ಮಾಡಲಿದ್ದಾರೆ. ವಿಜಯ್ ಹಾಗೂ 'ಜನತಾ ಗ್ಯಾರೇಜ್' ಚಿತ್ರದಲ್ಲಿ ಸಮಂತಾ ನಟಿಸುತ್ತಿದ್ದಾರೆ. 'ಜನತಾ ಗ್ಯಾರೇಜ್' ಚಿತ್ರ ಸಮಂತಾರ ಕಡೆಯ ಚಿತ್ರ ಎಂದು ಹೇಳಲಾಗ್ತಿತ್ತು. ಆದ್ರೆ ಮದುವೆ ಆದ ಮೇಲೆ ಹಲವು ಚಿತ್ರಗಳಲ್ಲಿ ಅವರು ನಟಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ನಟ ನಾಗಾರ್ಜುನ ಪುತ್ರನಾಗಿರುವ ನಾಗ ಚೈತನ್ಯ ಮನಂ ಸಿನಿಮಾದಲ್ಲಿ ಸಮಂತಾ ಜತೆಗೆ ನಟಿಸಿದ್ದರು. ಇದರ ಜತೆಗೆ ಸಮಂತಾ ಜತೆಗೆ ಪ್ರೀತಿಯಲ್ಲಿ ಬಿದ್ದಿದ್ದರು. ಸದ್ಯ ಲಿವೀಂಗ್ ಟುಗೆದರ್‌ನಲ್ಲಿರುವ ಈ ಜೋಡಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ.
 
ಗಚಿಬೌಲಿಯಲ್ಲಿರುವ ನಾಗಚೈತನ್ಯ ಫ್ಲಾಟ್‌ಲ್ಲಿ ಸಮಂತಾ ಒಟ್ಟಿಗೆ ಇದ್ದಾರಂತೆ. ಇವರಿಬ್ಬರು ಲಿವಿಂಗ್ ಟುಗೆದರ್‌ನಲ್ಲಿ ಇದ್ದಾರೆ ಎಂದು ಹೇಳಲಾಗ್ತಿದೆ. ಇದರ ಜತೆಗೆ ಸಮಂತಾ ಪಾರ್ಕ್ ಹ್ಯಾಟ್‌ನಲ್ಲಿ ಮನೆಯನ್ನು ಬಿಟ್ಟು ನಾಗ ಚೈತನ್ಯ ಜತೆ ಹೊಟೇಲ್‌ನಲ್ಲಿ ಇದ್ದಾರೆ ಎನ್ನಲಾಗಿದೆ.
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ