ಅಮೃತವರ್ಷಿಣಿ ಧಾರಾವಾಹಿ ಖ್ಯಾತಿಯ ರಕ್ಷಿತ್ ಅಭಿನಯಿಸಿರುವ ಸಿನಿಮಾ ನನ್ ಲವ್ ಟ್ರ್ಯಾಕ್. ಈ ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ.ರಕ್ಷಿತ್ ಅಭಿನಯದ ಈ ರೋಮ್ಯಾಂಟಿಕ್ ಸಿನಿಮಾಕ್ಕೆ ಅನೇಕ ತಾರೆಯರು ಶುಭ ಕೋರಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಎ.ಆರ್ . ರೆಹಮಾನ್ , ಖ್ಯಾತ ನಟ ನಿರ್ದೇಶಕ ಪ್ರಭುದೇವ್,ಹಾಗೇ ನಟ ಸೋನು ಸೂದ್ ಅವರು ವಿಡಿಯೋ ಮೂಲಕ ಶುಭ ಕೋರಿದ್ದಾರೆ.ಅಂದ್ಹಾಗೆ ನನ್ ಲವ್ ಟ್ರ್ಯಾಕ್ ಸಿನಿಮಾವನ್ನು ಕಾಲಿವುಡ್ ನ ಖ್ಯಾತ ನಿರ್ದೇಶಕ ಕಥೀರ್ ಅವರು ನಿರ್ದೇಶನ ಮಾಡಿದ್ದಾರೆ.ಅವರ ನಿರ್ದೇಶನದ ಸಿನಿಮಾ ಅಂದ್ರೆ ಅದು ಖಂಡಿತವಾಗಿಯೂ ಯಶಸ್ಸು ಪಡೆಯುತ್ತೆ ಅಂತಾ ಅವರು ಹೇಳಿದ್ದಾರೆ.