ರಾಜಕೀಯ ಸೇರ್ತಾರಂತೆ ನಟ ಸಂಜಯ್ ದತ್! ಯಾವ ಪಕ್ಷ ಗೊತ್ತಾ?

ಸೋಮವಾರ, 26 ಆಗಸ್ಟ್ 2019 (10:34 IST)
ಮುಂಬೈ: ಬಾಲಿವುಡ್ ನಟ ಸಂಜಯ್ ದತ್ ರಾಜಕೀಯ ಪಕ್ಷ ಸೇರುತ್ತಾರಂತೆ. ಆದರೆ ಅವರು ಯಾವ ಪಕ್ಷ ಸೇರಲಿದ್ದಾರೆ ಗೊತ್ತಾ? ಇದನ್ನು ಬಹಿರಂಗಪಡಿಸಿದವರು ಯಾರು ಗೊತ್ತಾ? ಈ ಸುದ್ದಿ ಓದಿ.


ಸಂಜಯ್ ದತ್ ಮಹಾರಾಷ್ಟ್ರದ ಆಡಳಿತಾರೂಢ ಸರ್ಕಾರದ ಮೈತ್ರಿ ಪಕ್ಷ ರಾಷ್ಟ್ರೀಯ ಸಮಾಜ ಪಕ್ಷ (ಆರ್ ಎಸ್ ಪಿ) ಸೇರಿಕೊಳ್ಳುತ್ತಾರೆ ಎಂದು ಸಚಿವ ಪಂಕಜ ಮುಂಡೆ ಹೇಳಿಕೊಂಡಿದ್ದಾರೆ.

ಆರ್ ಎಸ್ ಪಿ ಪಕ್ಷದ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಸಂಜಯ್ ದತ್ ವಿಶ್ ಮಾಡುವ ವಿಡಿಯೋ ಪ್ರಕಟಿಸಿದ ಸಚಿವರು ಸಂಜಯ್ ದತ್ ರನ್ನು ಬಿಗ್ ಬ್ರದರ್ ಎಂದು ಕರೆದಿದ್ದಾರೆ. ಅಷ್ಟೇ ಅಲ್ಲ, ಇನ್ನು 25 ದಿನದಲ್ಲಿ ದತ್ ಪಕ್ಷ ಸೇರಿಕೊಳ‍್ಳುವುದಾಗಿ ಹೇಳಿದ್ದಾರೆ ಎಂದಿದ್ದಾರೆ. ಸದ್ಯ ದುಬೈಯಲ್ಲಿರುವ ಸಂಜಯ್ ದತ್ ಭಾರತಕ್ಕೆ ಬಂದ ಕೂಡಲೇ ಆರ್ ಎಸ್ ಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಪಂಕಜ ಮುಂಡೆ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ