ಬೆಂಗಳೂರು: ಕಾಂತಾರ ಸಿನಿಮಾ ಮೂಲಕ ವಿಶ್ವದಾದ್ಯಂತ ಗಮನ ಸೆಳೆಯುತ್ತಿರುವ ರಿಷಬ್ ಶೆಟ್ಟಿ ಮೂಲ ಹೆಸರು ಪ್ರಶಾಂತ್. ಆದರೆ ಅವರು ಹೆಸರು ಬದಲಾಯಿಸಲು ಕಾರಣ ಯಾರು ಗೊತ್ತಾ?
ರಿಷಬ್ ಶೆಟ್ಟಿ ಜನ್ಮನಾಮ ಪ್ರಶಾಂತ್ ಶೆಟ್ಟಿ. ಕುಂದಾಪುರದ ಕೆರಾಡಿಯಲ್ಲಿ 1983 ರಂದು ಪ್ರಶಾಂತ್ ಶೆಟ್ಟಿ ಜನಿಸಿದರು. ಅವರ ತಂದೆ ಬಾಸ್ಕರ ಶೆಟ್ಟಿ ಜ್ಯೋತಿಷಿ ಮತ್ತು ಸಂಖ್ಯಾ ಶಾಸ್ತ್ರಜ್ಞ. ಅವರಿಗೆ ಮಗನಿಗೆ ಪ್ರಶಾಂತ್ ಶೆಟ್ಟಿ ಎಂದು ಹೆಸರಿಡುವುದರಿಂದ ಯಾವುದೇ ಏಳಿಗೆಯಾಗದು ಎಂದು ಗೊತ್ತಾಯಿತು.
ಹೀಗಾಗಿ ಹೆಸರು ಬದಲಾಯಿಸಿ ರಿಷಬ್ ಎಂದು ಮಾಡಿಬಿಟ್ಟರು. ರಿಷಬ್ ಎಂದು ಹೆಸರು ಬದಲಾಯಿಸಿದ ಬಳಿಕ ಅವರ ನಸೀಬು ಬದಲಾಯಿತು. ಆರಂಭದಲ್ಲಿ ನೀರಿನ ಕ್ಯಾನ್ ಬ್ಯುಸಿನೆಸ್, ಡ್ರೈವರ್ ಎಂದೆಲ್ಲಾ ಸಿಕ್ಕ ಸಿಕ್ಕ ಕೆಲಸವನ್ನು ಮಾಡುತ್ತಿದ್ದರು. ಸಿನಿಮಾ ರಂಗಕ್ಕೆ ಪ್ರವೇಶ ಪಡೆದ ತಕ್ಷಣವೂ ಅವರಿಗೆ ಅಂಥಾ ಅವಕಾಶ ಸಿಕ್ಕಿರಲಿಲ್ಲ. ಸಿನಿಮಾದ ಎಲ್ಲಾ ವಿಭಾಗಗಳಲ್ಲೂ ಕೆಲಸ ಮಾಡಿದರು.
2016 ರಲ್ಲಿ ರಿಕ್ಕಿ ಎನ್ನುವ ಸಿನಿಮಾ ನಿರ್ದೇಶಿಸಿದರು. ಆದರೆ ಆಗ ಅವರು ಥಿಯೇಟರ್ ಸಿಗದೇ ಒದ್ದಾಡಿದ್ದರು. ಆದರೆ ಬಳಿಕ ಕಿರಿಕ್ ಪಾರ್ಟಿ ಅವರ ಸಿನಿ ಜೀವನಕ್ಕೆ ದೊಡ್ಡ ಬ್ರೇಕ್ ಕೊಟ್ಟಿತು. ನಂತರ ಅವರು ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಒಂದಾದ ಮೇಲೊಂದರಂತೆ ಹಿಟ್ ಕೊಡುತ್ತಾ ಹೋದರು. ಇದೀಗ ಕಾಂತಾರ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ.