‘ಏಕ್, ದೋ, ತೀನ್, ಚಾರ್’ ಹಾಡಿನ ವಿವಾದಕ್ಕೆ ತೆರೆ ಎಳೆದ ಸರೋಜ್ ಖಾನ್!

ಭಾನುವಾರ, 25 ಮಾರ್ಚ್ 2018 (06:11 IST)
ಮುಂಬೈ : ಈ ಹಿಂದೆ ‘ಏಕ್, ದೋ, ತೀನ್,  ಚಾರ್’ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ ಹಿರಿಯ ನೃತ್ಯ ನಿರ್ದೇಶಕಿ ಸರೋಜ್ ಖಾನ್‍ ಅವರು ಈಗ ಈ ಹಾಡಿನ ಬಗ್ಗೆ ಉಂಟಾದ  ವಿರೋಧಕ್ಕೆ ತೆರೆ ಎಳೆದಿದ್ದಾರೆ.


ಇವರು ನೃತ್ಯ ನಿರ್ದೇಶಕರಾದ ಅಹ್ಮದ್ ಖಾನ್ ಮತ್ತು ಗಣೇಶ್ ಆಚಾರ್ಯರ ಪರಿಶ್ರಮದ ಬಗ್ಗೆ ಹೆಮ್ಮೆ ಪಟ್ಟುಕೊಂಡಿದ್ದಾರೆ. ಹಾಗೆ ಅವರಿಗೆ ತಮ್ಮ ಆಶೀರ್ವಾದವು ಇರುವುದಾಗಿ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು,’ ಏಕ್, ದೋ, ತೀನ್,  ಚಾರ್ ಹಾಡಿನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ನನ್ನ ಮತ್ತು ಅಹ್ಮದ್ ಖಾನ್ ನಡುವೆ ಗುರು ಶಿಷ್ಯರ ಸಂಬಂಧವಿದೆ. ಇಲ್ಲಿ ಒಬ್ಬರಿಗಿಂತ ಒಬ್ಬರು ಭಿನ್ನವಾಗಿದ್ದು, ಯಾವುದೇ ರೀತಿಯ ಸ್ಪರ್ಧೆ ಇರುವುದಿಲ್ಲ. ಹಳೆ ಗೀತೆಗಿಂತ ಹೊಸ ಹಾಡು ಉತ್ತಮವೆಂಬ ಅಂಶ ತಪ್ಪು ಏಕೆಂದರೆ ಈ ಗೀತೆಯನ್ನು ಏಕ್ ದೋ ತೀನ್ ತಂಡಕ್ಕೆ ಸಮರ್ಪಿಸಿದ್ದಾರೆ ಮತ್ತು ಬಾಘೀ-2 ಚಿತ್ರ ತಂಡವು ಬಹಳ ಶ್ರಮಪಟ್ಟಿದೆ’ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವುದರ ಮೂಲಕ ಈ ಹಾಡಿನ ಬಗೆಗಿನ ವಿವಾದಕ್ಕೆ ತೆರೆ ಎಳೆದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ