ಸಾನಿಯಾ ಮಿರ್ಜಾ ಪುಸ್ತಕ ಬಿಡುಗಡೆಗೆ ಸಲ್ಲು ಶಾರುಖ್, ಪರಿಣಿತಿಗೆ ಆಹ್ವಾನ

ಬುಧವಾರ, 13 ಜುಲೈ 2016 (09:29 IST)
ಬ್ಯಾಡ್‌ಮಿಂಟನ್ ತಾರೆ ಸಾನಿಯಾ ಮಿರ್ಜಾ ಕೇವಲ ಬ್ಯಾಡ್ ಮಿಂಟನ್ ಮಾತ್ರವಲ್ಲ ಪೆನ್ನು ಹಿಡಿದ್ರೆ ನಾನೊಬ್ಬ ಉತ್ತಮ ಬರಹಗಾರ್ತಿಯೂ ಹೌದು ಅನ್ನೋದನ್ನು ತೋರಿಸೋದಕ್ಕೆ ರೆಡಿಯಾಗಿದ್ದಾರೆ. ಸಾನಿಯಾ ಮಿರ್ಜಾ ಅವರು ತನ್ನ ಬದುಕಿನ ಕುರಿತು ಬರೆದ 'ಆಸ್ ಅಗೈನಿಸ್ಟ್ ಆಡ್ಸ್' ಅನ್ನೋ ಪುಸ್ತಕ ಇದೀಗ ರಿಲೀಸ್‌ಗೆ ರೆಡಿಯಾಗಿದೆ.

ಹೌದು...ಇದೇ ತಿಂಗಳ 13 ರಂದು ಸಾನಿಯಾ ಅವರ ಪುಸ್ತಕ ಬಿಡುಗಡೆಯಾಗಲಿದೆಯಂತೆ. ಖ್ಯಾತ ನಟ ಹಾಗೂ ಸಾನಿಯಾ ಸ್ನೇಹಿತ ಶಾರುಖ್ ಖಾನ್ ಅವರು ಹೈದರಾಬಾದ್‌ನಲ್ಲಿ ಪುಸ್ತಕವನ್ನು ಬಿಡುಗಡೆಗೊಳಿಸಲಿದ್ದಾರೆ. 
 
ಇನ್ನು ಅಚ್ಚರಿಯ ವಿಚಾರ ಅಂದ್ರೆ ಜುಲೈ 17 ರಂದು ಮತ್ತೊಂದು ವಿಶೇಷ ಕಾರ್ಯಕ್ರಮದಲ್ಲಿ ನಟ ಸಲ್ಮಾನ್ ಖಾನ್ ಅವರು ಕೂಡ ಪುಸ್ತಕವನ್ನು ಬಿಡುಗಡೆಗೊಳಿಸಲಿದ್ದಾರಂತೆ. ದೆಹಲಿಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪರಿಣಿತಾ ಛೋಪ್ರಾ ಅವರು ಕೂಡ ಭಾಗವಹಿಸಲಿದ್ದಾರೆ.
 
ಅಂದ್ಹಾಗೆ ಬಾಲಿವುಡ್‌ನಲ್ಲಿ ಸಾನಿಯಾ ಜೀವನ ಕಥೆ ಸಿನಿಮಾವಾಗುತ್ತಿರೋದು ಗೊತ್ತಿದೆ. ಈ ಸಿನಿಮಾದಲ್ಲಿ ಪರಿಣಿತಿ ಛೋಪ್ರಾ ಸಾನಿಯಾ ಪಾತ್ರವನ್ನು ನಿರ್ವಹಿಸಲಿದ್ದಾರೆ. ಹಾಗಾಗಿ ಕಾರ್ಯಕ್ರಮಕ್ಕೆಪರಿಣಿತಿ ಛೋಪ್ರಾಗೆ ವಿಶೇಷ ಆಹ್ವಾನ ಸಿಕ್ಕಿದೆ. ಇನ್ನು ಸಾನಿಯಾ ಗೆಳತಿ ಖ್ಯಾತ ನಿರ್ದೇಶಕಿ , ಕೊರಿಯಾಗ್ರಫರ್ ಫರ್ಹಾ ಖಾನ್ ಕೂಡ ಈ ಸಂದರ್ಭದಲ್ಲಿ ಸಾಕ್ಷಿಯಾಗಲಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ