ಶಾರೂಖ್ ಖಾನ್ ಹಾಗೂ ಸಲ್ಮಾನ್ ಖಾನ್ ಇಬ್ಬರು ಜತೆಗೂಡಿ ಸೈಕಲ್ ಸವಾರಿ ಮಾಡಿದ್ದಾರೆ. ಈ ವೇಳೆ ಇಬ್ಬರು ಸ್ನೇಹಿತರಂತೆ ಜತೆಗೂಡಿ ಸೈಕಲ್ ಮೇಲೆ ಕುಳಿತುಕೊಂಡು ಪೋಸ್ ನೀಡಿರುವುದರ ಬಗ್ಗೆ ಎಸ್ಆರ್ಕೆ ತಮ್ಮ ಅಭಿಮಾನಿಗಳಿಗೆ ಫೊಟೋ ಶೇರ್ ಮಾಡಿದ್ದಾರೆ. ಮಾಲಿನ್ಯವನ್ನು ತಡೆಯಲು ಸೈಕಲ್ ಸವಾರಿ ಮಾಡುವಂತೆ ಸಂದೇಶ ನೀಡಲು ಸಲ್ಲು ಹಾಗೂ ಕಿಂಗ್ ಖಾನ್ ಸೈಕಲ್ ಸವಾರಿ ಮಾಡಿರುವುದು ತಿಳಿದು ಬಂದಿದೆ.
ಈ ಮೂಲಕ ನಾವಿಬ್ಬರು ಸ್ನೇಹಿತರು ಎಂಬ ಸಂದೇಶವನ್ನು ಸಲ್ಮಾನ್ ಸಾರಿದ್ದಾರೆ. ಈ ಕುರಿತು ಟ್ವಿಟರ್ನಲ್ಲಿ ಶಾರೂಖ್ ಫೊಟೋಗಳನ್ನು ಅಭಿಮಾನಿಗಳಿಗೆ ಹಾಗೂ ಫಾಲೋವರ್ಸ್ಗಳಿಗೆ ಶೇರ್ ಮಾಡಿದ್ದಾರೆ. 'ಭಾಯಿ ಭಾಯಿ ನೋ ಬೈಕ್ ರೈಡ್' ,ಮೈಕಲ್ ಲಾಲ್ ಸೈಕಲ್ ಲಾಲ್ ಎಂದು ಎಸ್ಆರ್ಕೆ ಕ್ಯಾಪ್ಶನ್ ನೀಡಿದ್ದಾರೆ.