ಇಂದು ಆಪಲ್ ಸಿಇಓ ಭಾರತಕ್ಕೆ ಆಗಮನ.. ಕಿಂಗ್ ಖಾನ್ ಶಾರೂಖ್‌ರಿಂದ ಆತಿಥ್ಯ

ಬುಧವಾರ, 18 ಮೇ 2016 (12:30 IST)
ಇಂದು ಆಪಲ್ ಕಂಪನಿಯ ಕಾರ್ಯ ನಿರ್ವಾಹಕ ಮುಖ್ಯಸ್ಥ ಟಿಮ್ ಕುಕ್ ಭಾರತಕ್ಕೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಲಿವುಡ್‌ನ ಬಾದ್‌ಶಾಹ್ ಶಾರೂಖ್ ಖಾನ್ ಆತಿಥ್ಯ ಸಮಾರಂಭ ಆಯೋಜನೆ ಮಾಡಿದ್ದಾರೆ.
ಮೊದಲು  ಕುಕ್ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ. ಅದಾದ ಬಳಿಕ ಇಂದು ರಾತ್ರಿ ಶಾರೂಖ್ ಖಾನ್  ಆಯೋಜನೆ ಮಾಡಿರೋ ಭೋಜನಕೂಟದಲ್ಲಿ  ಕುಕ್ ಭಾಗಿಯಾಗಲಿದ್ದಾರೆ.  

ಅಂದಹಾಗೆ ಶಾರೂಖ್ ತಮ್ಮ ನಿವಾಸದಲ್ಲಿ ಇಂದು ರಾತ್ರಿ ಭೋಜನಕೂಟವನ್ನು ಆಯೋಜಿಸಿದ್ದಾರಂತೆ. ಇತ್ತೀಚೆಗೆ ಸಿಇಓ ಟಿಮ್ ಕುಕ್ ಕಿಂಗ್ ಖಾನ್ ಶಾರೂಖ್ ಅವರನ್ನು ಭೇಟಿ ಮಾಡುವುದರ ಬಗ್ಗೆ ಮಾತನಾಡಿದ್ದರು. ಆದ್ದರಿಂದ ಎಸ್‌ಆರ್‌ಕೆ ಇಂದು ಟಿಮ್‌ಗಾಗಿ ಭೋಜನಕೂಟ ಏಪಾರ್ಡು ಮಾಡಿದ್ದಾರೆ. ಅದಲ್ಲದೇ ಇದೇ ವೇಳೆ ಶಾರೂಖ್ ಖಾನ್ ಆಪ್ತರು, ಸ್ನೇಹಿತರು ಭಾಗಿಯಾಗಲಿದ್ದಾರೆ.

ಮೇಕ್ ಇನ್ ಇಂಡಿಯಾ ಯೋಜನೆಯ ಅಡಿಯಲ್ಲಿ ಭಾರತದಲ್ಲೇ ಐಫೋನ್ ಹಾಗೂ ಬಿಡಿಭಾಗಗಳ ಉತ್ಪಾದನೆ ಆಪಲ್ ಮುಂದಾಗಿದೆ. ಈ ಹಿಂದೆ ವ್ಯಾಪಾರದಲ್ಲಿ ಕುಸಿತ ಕಂಡಾಗ ಚೀನಾ ಪ್ರವಾಸ ಕೈಗೊಂಡ ಅಲ್ಲಿನ ಮಾರುಕಟ್ಟೆ ಅರಿತು ವ್ಯಾಪಾರಾಭಿವೃದ್ಧಿ ಕೈಗೊಂಡಿದ್ದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ