ಶಾಹೀದ್ ಕಪೂರ್ ಅವರಿಗೆ ಅಭಿನಂದನೆ ಸಲ್ಲಿಸಿದ ನಟಿ ಕರೀನಾ ಕಪೂರ್

ಬುಧವಾರ, 31 ಆಗಸ್ಟ್ 2016 (09:08 IST)
ಶಾಹೀದ್ ಕಪೂರ್ ಹಾಗೂ ಮೀರಾ ರಜಪೂತ್ ಸದ್ಯ ತಮ್ಮ ಮೊದಲ ಮಗುವಿನ ಆಗಮನ ಖುಷಿಯನ್ನು ಅನುಭವಿಸುತ್ತಿದ್ದಾರೆ. ಮೊನ್ನೆ ತಾನೇ ಮೀರಾ ರಜಪೂತ್ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ದಂಪತಿ ಮಗುವಿನೊಂದಿಗೆ ಖುಷಿಯ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಅನೇಕ ತಾರೆಯರು ದಂಪತಿಗೆ ಶುಭ ಹಾರೈಸಿದ್ದಾರೆ.ಅದರಲ್ಲೂ ಸ್ಪೆಷಲ್ ವ್ಯಕ್ತಿಯೊಬ್ಬರು ಶಾಹೀದ್ ಕಪೂರ್ ಅವರಿಗೆ ಶುಭ ಹಾರೈಸಿದ್ದಾರೆ.
ಶಾಹೀದ್ ಕಪೂರ್ ಅವರಿಗೆ ಶುಭ ಹಾರೈಸಿರೋ  ವ್ಯಕ್ತಿ ಯಾರು ಅಂತಾ ನಿಮೇಗೇನಾದ್ರೂ ಗೊತ್ತಾದ್ರೆ ಅಚ್ಚರಿಯಾಗೋದು ಗ್ಯಾರಂಟಿ.ಅಂದ್ಹಾಗೆ ಶಾಹೀದ್ ಕಪೂರ್ ಅವರಿಗೆ ಶುಭ ಹಾರೈಸಿರೋದು ಅವರ ಮಾಜಿ ಪ್ರಿಯತಮೆ ಕರೀನಾ ಕಪೂರ್ ಅವರು.

ಈ ಹಿಂದೆ ಉಡ್ತಾ ಪಂಜಾಬ್ ಸಿನಿಮಾದಲ್ಲಿ ಕರೀನಾ ಹಾಗೂ ಶಾಹೀದ್ ಕಪೂರ್ ಅವರು ಜೊತೆಯಾಗಿ ಅಭಿನಯಿಸಿದ್ದರೂ ಕರೀನಾ ಮಾತ್ರ ಶಾಹೀದ್ ಅವರ ಮುಖ ನೋಡೋದಕ್ಕೆ ಹಿಂದೇಟು ಹಾಕುತ್ತಿದ್ದರು. ಅಷ್ಟೇ ಅಲ್ಲ ಸಿನಿಮಾದ ಪ್ರಮೋಷನ್ ಕಾರ್ಯಕ್ರಮದಲ್ಲಿಯೂ ಇವರಿಬ್ಬರು ದೂರ ದೂರ.ಆದ್ರೀಗ ಬೆಬೋ ತಂದೆಯಾದ ಶಾಹೀದ್ ಕಪೂರ್ ಅವರಿಗೆ ಶುಭ ಹಾರೈಸಿದ್ದಾರೆ.

ಮೆಸೇಜ್ ಮೂಲಕ ಶಾಹೀದ್ ಕಪೂರ್ ಅವರಿಗೆ ಕರೀನಾ ಕಪೂರ್ ಅವರು ಶುಭ ಹಾರೈಸಿದ್ದಾರೆ. ಕರೀನಾ ಕಪೂರ್ ಅವರು ಕೂಡ ಸದ್ಯ ತಮ್ಮ ಮೊದಲ ಮಗುವನ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೇ ಶಾಹೀದ್ ಕಪೂರ್ ಹಾಗೂ ಕರೀನಾ ಪತಿ ಸೈಫ್ ಆಲಿಖಾನ್ ಅವರು ರಂಗೂನ್ ಸಿನಿಮಾದಲ್ಲಿ ಜೊತೆಯಾಗಿ ಅಭಿನಯಿಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ