ಅಭಿಮಾನಿಗಳ ಜತೆ ಶಾರುಖ್ ಖಾನ್ ಬರ್ತ್ ಡೇ ಇಲ್ಲ

ಬುಧವಾರ, 2 ನವೆಂಬರ್ 2016 (10:15 IST)
ಮುಂಬೈ: ಬಾಲಿವುಡ್ ನ ಕಿಂಗ್ ಆಫ್ ರೊಮ್ಯಾನ್ಸ್, ಶಾರುಖ್ ಖಾನ್ 51 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಆದರೆ ಈ ಬಾರಿ ಬರ್ತ್ ಡೇ ದಿನ ಮನೆ ಮುಂದೆ ಜಮಾಯಿಸುವ ಅವರ ಅಭಿಮಾನಿಗಳಿಗೆ ನಿರಾಸೆಯಾಗಲಿದೆ.

ಯಾಕೆಂದರೆ ಬಾಲಿವುಡ್ ಬಾದ್ ಶಹಾ ಕೇವಲ ಸ್ನೇಹಿತರು ಮತ್ತುಕುಟುಂಬದವರ ಜತೆಗೂಡಿ ಮುಂಬೈನಿಂದ ಹೊರಗೆ ಪಾರ್ಟಿ ಮಾಡಲಿದ್ದಾರೆ. ಪ್ರತೀ ಬಾರಿಯಂತೆ ಮನೆ ಹೊರಗೆ ತನಗೋಸ್ಕರ ಕಾಯುವ ಅಭಿಮಾನಿಗಳ ಮುಂದೆ ಬರುವ ಯೋಜನೆಯನ್ನು ಕ್ಯಾನ್ಸಲ್ ಮಾಡಿಕೊಂಡಿದ್ದಾರೆ.

ಈ ಸಾರಿ ಬರ್ತ್ ಡೇ ಪಾರ್ಟಿಯಲ್ಲಿ ಕರಣ್ ಜೋಹರ್, ರಣಬೀರ್ ಕಪೂರ್, ಗೌರಿ ಖಾನ್ ಸ್ನೇಹಿತರು ಮಾತ್ರ ಇರುತ್ತಾರಂತೆ. ಬಚ್ಚನ್ ಕುಟುಂಬ ಬಂದರೂ ಬರಬಹುದು ಎಂದು ಮೂಲಗಳು ಹೇಳಿವೆ. ಹೀಗಾಗಿ ಶಾರುಖ್ ಬರ್ತ್ ಡೇ ಈ ಸಾರಿ ಸೀಕ್ರೆಟ್.. ಸೀಕ್ರೆಟ್..

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ