ನಾನು ಸಿನಿಮಾದಲ್ಲಿ ಲವ್ ಗುರು ಅಲ್ಲ ಅಂದ್ರು ಶಾರುಖ್ ಖಾನ್

ಶುಕ್ರವಾರ, 29 ಏಪ್ರಿಲ್ 2016 (15:36 IST)
ಗೌರಿ ಶಿಂಧೆ ನಿರ್ದೇಶನದ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಶಾರುಖ್ ಹಾಗೂ ಆಲಿಯಾ ಭಟ್ ಅಭಿನಯಿಸುತ್ತಿದ್ದರು. ಇಬ್ಬರ ನಡುವೆ ಸಾಕಷ್ಟು ವಯಸ್ಸಿನ ಅಂತರ ಇರೋದರಿಂದ ಈ ಸಿನಿಮಾ ಹೇಗೆ ಮೂಡಿ ಬರುತ್ತೆ ಅನ್ನೋ ಕಾತುರ ಅಭಿಮಾನಿಗಳಲ್ಲಿ ಮೂಡಿದೆ. ಹೀಗಿರುವಾಗಲೇ ಸಿನಿಮಾದಲ್ಲಿನ ಪಾತ್ರದ ಬಗ್ಗೆ ಶಾರುಖ್ ಅಚ್ಚರಿಯ ವಿಚಾರವೊಂದನ್ನು ಹೇಳಿದ್ದಾರೆ.
ಈ ಸಿನಿಮಾದಲ್ಲಿ ಕಿಂಗ್ ಖಾನ್ ಅವರು ಲವ್ ಗುರು ಪಾತ್ರವನ್ನು ಮಾಡಲಿದ್ದಾರೆ ಅಂತಾ ಈ ಹಿಂದೆ ಸಿನಿಮಾ ತಂಡ ಹೇಳಿತ್ತು.ಆದ್ರೀಗ ಸ್ವತಃ ಶಾರುಖ್ ಖಾನ್ ಅವರೇ ಸಿನಿಮಾದಲ್ಲಿ ನಾನು ಲವ್ ಗುರು ಪಾತ್ರವನ್ನು ನಿರ್ವಹಿಸುತ್ತಿಲ್ಲ ಅಂತಾ ಹೇಳಿದ್ದಾರೆ. 
 
ಅಲ್ಲದೇ ಇದು ಕೇವಲ ನಾಯಕ ಹಾಗೇ ನಾಯಕಿ ಪ್ರಧಾನವಾದ ಸಿನಿಮಾವಲ್ಲ ಅಂತಾ ಹೇಳಿದ್ದಾರೆ.ಇದು ತುಂಬಾ ಆಸಕ್ತಿಕರ ಹಾಗೇ ವಿಭಿನ್ನವಾದ ಸಿನಿಮಾ ಅನ್ನೋ ಮೂಲಕ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಗಹಲವನ್ನು ಹುಟ್ಟಿ ಹಾಕಿದ್ದಾರೆ.
 
ಸಿನಿಮಾಕ್ಕಾಗಿ ನಾನು ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿದ್ದೇನೆ ಅಂದಿರುವ ಶಾರುಖ್ ಆಲಿಯಾ ಭಟ್ ಅವರೊಂದಿಗೆ ಅಭಿನಯಿಸುವಾಗ ನಾನು ತುಂಬಾನೇ ಎಂಜಾಯ್ ಮಾಡುತ್ತಿದ್ದೆ ಅಂತಾ ಹೇಳಿದ್ದಾರೆ.ಗೌರಿ ಹಾಗೂ ಆಲಿಯಾ ಇಬ್ಬರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ಖುಷಿಯಾಗಿದೆ ಅಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ