ಮನೆಕೆಲಸದಾಕೆಗೆ ಕಿಸ್ ಮಾಡಿದ್ದಕ್ಕೆ ಗಂಡನಿಗೆ ಯದ್ವಾ ತದ್ವಾ ಹೊಡೆದ ನಟಿ ಶಿಲ್ಪಾ ಶೆಟ್ಟಿ!

ಗುರುವಾರ, 14 ಮೇ 2020 (10:25 IST)
ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತನ್ನ ಮುದ್ದಿನ ಗಂಡ ರಾಜ್ ಕುಂದ್ರಾಗೆ ಯದ್ವಾ ತದ್ವಾ ಹೊಡೆದಿದ್ದಾರೆ. ಇದಕ್ಕೆ ಕಾರಣ, ರಾಜ್ ಕುಂದ್ರಾ ಮನೆಕೆಲಸದಾಕೆಗೆ ಕಿಸ್ ಮಾಡಿದ್ದಂತೆ!

 
ಆದರೆ ಇದೆಲ್ಲಾ ಟಿಕ್ ಟಾಕ್ ಮಾಯೆ ಅಷ್ಟೇ. ಟಿಕ್ ಟಾಕ್ ನಲ್ಲಿ ತಮಾಷೆಯ ವಿಡಿಯೋವೊಂದನ್ನು ಅಪ್ ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಶಿಲ್ಪಾ ಮನೆಕೆಲಸದಾಕೆಯ ವೇಷ ಧರಿಸಿದ್ದು, ಆಕೆ ತನಗೆ ನಿನ್ನ ಗಂಡ ಮುತ್ತು ಕೊಟ್ಟ ಎಂದು ಆರೋಪಿಸುತ್ತಾಳೆ. ಆಗ ಶಿಲ್ಪಾ ರಾಜ್ ಕುಂದ್ರಾಗೆ ಹಿಗ್ಗಾ ಮುಗ್ಗಾ ಥಳಿಸುತ್ತಾರೆ.

ಈ ಫನ್ನಿ ವಿಡಿಯೋ ನೋಡಿ ಹಲವಾರು ಜನ ಲೈಕ್ ಮಾಡಿದ್ದಾರೆ. ಹಿಂದೊಮ್ಮೆ ಶಿಲ್ಪಾ ರಾಜ್ ಕುಂದ್ರಾ ಕೆನ್ನೆಗೆ ಬಾರಿಸುವ ತಮಾಷೆಯ ವಿಡಿಯೋ ಅಪ‍್ ಲೋಡ್ ಮಾಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ