ಶಿವಾಯ್ ಚಿತ್ರದ ಎರಡನೇ ಟ್ರೇಲರ್ ಬಿಡುಗಡೆ

ಸೋಮವಾರ, 24 ಅಕ್ಟೋಬರ್ 2016 (14:28 IST)
ಮುಂಬೈ: ಅಜಯ್ ದೇವಗನ್ ತಮ್ಮ ಹೋಂ ಬ್ಯಾನರ್ ನಲ್ಲಿ ನಿರ್ಮಿಸಿ , ನಿರ್ದೇಶಿಸಿದ ಶಿವಾಯ್ ಚಿತ್ರ ಈ ವಾರ ತೆರೆಕಾಣಲಿದೆ. ಅದರ ಎರಡನೇ ಟ್ರೇಲರ್ ನ್ನು ಅಜಯ್ ಬಿಡುಗಡೆ ಮಾಡಿದ್ದಾರೆ.

ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಯೂ ಟ್ಯೂಬ್ ನಲ್ಲಿ ಭರ್ಜರಿ ಮೆಚ್ಚುಗೆಗೆ ಪಾತ್ರವಾಗಿದೆ. ಅಜಯ್ ಸ್ವತಃ ನಾಯಕರಾಗಿರುವ ಚಿತ್ರದಲ್ಲಿ ಸಯೇಷಾ ಸೈಗಲ್, ಎರಿಕಾ ಕಾರ್, ಗಿರೀಶ್ ಕಾರ್ನಾಡ್ ಮುಂತಾದವರು ಅಭಿನಯಿಸಿದ್ದಾರೆ.

ಇದೊಂದು ಸಾಹಸಮಯ ಚಿತ್ರವಾಗಿದ್ದು, ಮುಸ್ಸೋರಿ ಮತ್ತು ಬಲ್ಗೇರಿಯಾದಂತಹ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಇದು ಸಂಪೂರ್ಣವಾಗಿ ಅಜಯ್  ದೇವಗನ್ ಶೈಲಿಯ ಚಿತ್ರವಾಗಿದ್ದು, ಇದೇ ವಾರ ಬಿಡುಗಡೆಯಾಗಲಿರುವ ಏ ದಿಲ್ ಹೇ ಮುಷ್ಕಿಲ್ ಗೆ ಪೈಪೋಟಿಯೊಡ್ಡಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ