ಪಾಕ್‌ನ ಮಾಜಿ ಕ್ರಿಕೆಟಿಗ ಶೋಯಿಬ್ ಅಖ್ತರ್‌ಗೆ ಬಾಲಿವುಡ್‌ನಲ್ಲಿ ಆಸಕ್ತಿ ಇಲ್ವಂತೆ

ಬುಧವಾರ, 27 ಜುಲೈ 2016 (17:35 IST)
ಪಾಕಿಸ್ತಾನದ ಹಲವು ನಟರು ಬಾಲಿವುಡ್‌ನಲ್ಲಿ ಹೆಸರು ಮಾಡಿದ್ದಾರೆ. ಪಾಕಿಸ್ತಾನದ ಕೆಲ ನಟರು ಬಾಲಿವುಡ್ ‌ನಲ್ಲಿ ನಟಿಸುವುದರ ಮೂಲಕ ಕೇವಲ ಹೆಸರು ಮಾಡಿಲ್ಲ.. ಅವರೆಲ್ಲಾ ಬಾಲಿವುಡ್‌ನಲ್ಲೂ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈಗಾಗ್ಲೇ ಸಾಕಷ್ಟು ಹೆಸರು ಮಾಡಿರೋವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಿಬ್ ಅಖ್ತರ್ ತಮ್ಮಗೇ ಬಾಲಿವುಡ್‌ನಲ್ಲಿ ಆಸಕ್ತಿ ಇಲ್ಲ ಎಂದು ತಿಳಿಸಿದ್ದಾರೆ.

 
ಪಾಕಿಸ್ತಾನ ಹಾಗೂ ಭಾರತ ಕ್ರಿಕೆಟ್ ನಡೆಯುವಾಗ ಇಬ್ಬರ ಮಧ್ಯೆ ವಾರ್ ಆಗುತ್ತೆ... ಭಾರತದ ಹಲವು ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಪಾಲ್ಗೊಳ್ಳುವ ಪಾಕ್ ಕ್ರಿಕೆಟಿಗರು ಮನರಂಜನೆ ನೀಡುತ್ತಾರೆ.

ಅಂದಹಾಗೆ ರಾವಲ್ಪಿಂಡಿ ಎಕ್ಸ್‌ಪ್ರೆಸ್ ಅಂತಲೇ ಹೆಸರುವಾಸಿಯಾಗಿರುವ ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಶೋಯಿಬ್ ಅಖ್ತರ್ , ಬಾಲಿವುಡ್‌ನಲ್ಲಿ ತಮಗೆ ಅಭಿನಯಿಸುವುದಕ್ಕೆ ಯಾವುದೇ ಆಸಕ್ತಿ ಇಲ್ಲ ಎಂದು ತಿಳಿಸಿದ್ದಾರೆ. 
 
40 ವರ್ಷದ ಶೋಯಿಬ್ ಕೈ ತುಂಬಾ ಕೆಲಸವಿದೆಯಂತೆ. ಈ ಹಿನ್ನೆಲೆಯಲ್ಲಿ ಹೆಚ್ಚು ಕೆಲಸ ತೆಗೆದುಕೊಳ್ಳುವುದು ಶೋಯಿಬ್ ಕುಟುಂಬಕ್ಕೆ ಇಷ್ಟವಿಲ್ವಂತೆ.. ನನ್ನ ಕುಟುಂಬ ಹಾಗೂ ನಾನು ಕೆಲಸದಲ್ಲಿ ನಿರತರಾಗಿರುವುದರಿಂದ ಆ ಬಗ್ಗೆ ಯೋಚಿಸಿಲ್ಲ ಎಂದು ತಿಳಿಸಿದ್ದಾರೆ. ಸದ್ಯ ಟಿವಿಯ ಕಾಮಿಡಿ ಶೋವೊಂದರಲ್ಲಿ ಶೋಯೆಬ್ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

ವೆಬ್ದುನಿಯಾವನ್ನು ಓದಿ