ಇದು ನಿಜಕ್ಕೂ ಶಾಕಿಂಗ್.. 2017ರ ನೆಚ್ಚಿನ ಚಿತ್ರ ಯಾವುದು ಗೊತ್ತಾ..

ಶನಿವಾರ, 15 ಜುಲೈ 2017 (18:22 IST)
ಮುಂಬೈ:2017ರ ಮೊದಲಾರ್ಧದಲ್ಲಿ ಬಾಲಿವುಡ್ ನ ಯಾವ ಚಿತ್ರವನ್ನು ಸಿನಿಪ್ರಿಯರ ನೆಚ್ಚಿನ ಚಿತ್ರ ಎಂಬುದನ್ನು ತಿಳಿಯಲು 7 ಚಿತ್ರಗಳನ್ನು ಆಯ್ಕೆ ಮಾಡಲಾಗಿತ್ತು. ಈ ಆಯ್ಕೆಯಲ್ಲಿ ಜನರಿಂದ ಬಂದ ಉತ್ತರ ಹಾಗೂ ಚಿತ್ರದ ಹೆಸರು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.  ಅದರಲ್ಲಿ ಅಚ್ಚರಿ ಏನು ಪ್ರಭಾಸ್ ಅಭಿನಯದ ಬಾಹುಬಲಿ-2 (ಹಿಂದಿ) ಎಂಬುದು ನಿಮ್ಮ ಆಯ್ಕೆ ಅಲ್ವಾ. ಖಂಡಿತಾ ತಪ್ಪು. ಶಾಕ್ ಆದ್ರಾ..?
 
ಅಂದಹಾಗೆ ಆಯ್ಕೆಗೆ ಇಟ್ಟ 7 ಚಿತ್ರಗಳೆಂದರೆ ಹೃತಿಕ್ ರೋಷನ್ ಅಭಿನಯದ ಕಾಬಿಲ್, ಪ್ರಭಾಸ್ ಅಭಿನಯದ ಬಾಹುಬಲಿ-2, ಬದ್ರಿನಾಥ್ ಕಿ ದುಲ್ಹನಿಯಾ, ಹಿಂದಿ ಮೀಡಿಯಮ್, ಸಚಿನ್ ಎ ಬಿಲಿಯನ್ ಡ್ರೀಮ್ಸ್, ದ ಗಾಝಿ ಅಟ್ಯಾಕ್ ಹಾಗೂ ಟ್ರ್ಯಾಪ್ಡ್ ಚಿತ್ರಗಳನ್ನು ಇಡಲಾಗಿತ್ತು. ಈ ಎಲ್ಲಾ ಚಿತ್ರಗಳಲ್ಲಿ ಜನರ ಆಯ್ಕೆ ಬಾಹುಬಲಿ-2 ಚಿತ್ರ ಎಂಬುದು ನಮ್ಮ-ನಿಮ್ಮೆಲ್ಲರ ನಿರೀಕ್ಷೆ.  ಆದರೆ ಜನರ ಆಯ್ಕೆ ಕಾಬಿಲ್.
 
ಹೌದು.. 2017ರ ಮೊದಲಾರ್ಧದಲ್ಲಿ ಬಾಲಿವುಡ್ ನಲ್ಲಿ ಜನರು ಹೆಚ್ಚು ಲೈಕ್ ಮಾಡಿದ ಚಿತ್ರ ಹೃತಿಕ್ ರೋಷನ್ ಅಭಿನಯದ ಕಾಬಿಲ್.  ಚಿತ್ರದ ಆಯ್ಕೆಯಲ್ಲಿ ನಡೆದ ಮತದಾನದಲ್ಲಿ ಜನಮನಗೆದ್ದ ಚಿತ್ರ ಕಾಬಿಲ್. ಕಾಬಿಲ್ ಬಾಹುಬಲಿ ಚಿತ್ರಕ್ಕಿಂತ ಶೇ.68 ಮತಗಳನ್ನು ಗೆಲ್ಲುವ ಮೂಲಕ ಮುಂಚೂಣಿಯಲ್ಲಿದೆ. ಶೇ.18ರಷ್ಟು ಮತಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿ ಬಾಹುಬಲಿ-2 ಹಾಗೂ ನಂತರದ ಸ್ಥಾನದಲ್ಲಿ ಬದ್ರಿನಾಥ್ ಕಿ ದುಲ್ಹನಿಯಾ ಚಿತ್ರವಿದೆ ಎಂಬುದು ವಿಶೇಷ.
 

ವೆಬ್ದುನಿಯಾವನ್ನು ಓದಿ