ಲೇಟ್ ನೈಟ್ ಪಾರ್ಟಿಯಿಂದ ಬೇಸತ್ತ ನಟಿಯ ಪೋಷಕರು

ಮಂಗಳವಾರ, 27 ಸೆಪ್ಟಂಬರ್ 2016 (09:56 IST)
ಚಿತ್ರರಂಗದಲ್ಲಿ ನಟ-ನಟಿಯರು ಪಾರ್ಟಿ ಮಾಡುವುದು, ಲೇಟ್ ನೈಟ್ ಪಾರ್ಟಿಗೆ ಹೋಗುವುದು ಎಲ್ಲವು ಕಾಮನ್. ಆದ್ರೆ ಇಲ್ಲೊಬ್ಬ ನಟಿಯೊಬ್ಬಳು ಲೇಟ್ ನೈಟ್ ಪಾರ್ಟಿ ಮಾಡಿ ಸುದ್ದಿ ಮಾಡಿದ್ದಾಳೆ. ಅಷ್ಟಕ್ಕೂ ಆ ನಟಿ ಮೇಲೆ ಪೋಷಕರು ಸಿಟ್ಟಾಗಿದ್ದು ಯಾಕೆ? ನಟಿಗೆ ಪೋಷಕರು ನೀಡಿದ ವಾರ್ನಿಂಗ್ ಏನು? ಎಂಬುದರ ಕುರಿತು ಇಲ್ಲಿದೆ ವರದಿ.


ಖ್ಯಾತ ನಟ ಶಕ್ತಿ ಕಪೂರ್ ಪುತ್ರಿ ನಟಿ ಶ್ರದ್ಧಾ ಕಪೂರ್ ಬಾಲಿವುಡ್ ನಲ್ಲಿ ಬೆಳೆಯುತ್ತಿರುವ ನಟಿ. ಶ್ರದ್ಧಾ ಈಗಾಗ್ಲೇ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.. ಆದ್ರೆ ಇದೀಗ ಅವರು ಸುದ್ದಿಯಾಗಿರೋದು ಸಿನಿಮಾದಲ್ಲಲ್ಲ. ಬದಲಾಗಿ ಲೇಟ್ ನೈಟ್‌ ಪಾರ್ಟಿಗೆ ಹೋಗಿ ಸುದ್ದಿಯಾಗಿದ್ದಾರೆ. 
 
ಖ್ಯಾತ ಹಿರಿಯ ನಟ ಶಕ್ತಿ ಕಪೂರ್ ಹಾಗೂ ಶಿವಾಂಗಿ ಪುತ್ರಿಯಾಗಿರುವ ಶ್ರದ್ಧಾ, ಇತ್ತೀಚೆಗೆ ತೆರೆ ಕಂಡ ಹಾಫ್ ಗರ್ಲ್ ಫ್ರೆಂಡ್ ಚಿತ್ರದ ಮೂಲಕ ಹೆಸರು ಮಾಡಿದ್ದರು, ಆದ್ರೆ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಸಂಜೆ ಪಾರ್ಟಿಗೆ ತೆರಳುವ ನಟಿ ಶ್ರದ್ಧಾ, ಗೆಳತಿಯರ ದಂಡು ಕಟ್ಟಿಕೊಂಡು ಪಾರ್ಟಿಗೆ ಹೋಗ್ತಾರಂತೆ.
 
ಇದು ಅವರ ಪೋಷಕರಿಗೆ ಸರಿ ಕಾಣುತ್ತಿಲ್ಲ. ಶ್ರದ್ಧಾ ಲೇಟ್ ನೈಟ್ ಪಾರ್ಟಿಗೆ ಹೋಗುವುದು ಪೋಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಇದರಿಂದ ಫುಲ್ ಗರಂ ಆಗಿರೋ ಪೋಷಕರು ಇನ್ನೂ ಮುಂದೆ ಸರಿಯಾದ ಸಮಯಕ್ಕೆ ಮನೆಗೆ ಬರಬೇಕು ಎಂದು ವಾರ್ನಿಂಗ್ ಕೂಡ ಮಾಡಿದ್ದಾರಂತೆ. ಅಲ್ಲದೇ ಚಿತ್ರರಂಗದಲ್ಲಿ ಬೆಳೆಯುವುದರತ್ತ ಗಮನ ಕೊಡು ಅಂತ ಹೇಳಿದ್ದಾರೆ. ಇದು ನಿನ್ನ ವೃತ್ತಿ ಬದುಕಿನ ಬಗ್ಗೆ ಪರಿಣಾಮ ಬೀರಬಹುದು ಎಂದು ಸಲಹೆ ನೀಡಿದ್ದಾರೆ ಎನ್ನಲಾಗ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ