"ಸಾಮಾನ್ಯವಾಗಿ ನನ್ನ ಸಹ ನಟರೊಂದಿಗೆ ಸಂಬಂಧ ಇದೆ ಎಂಬ ಮಾತುಗಳನ್ನು ನಾನು ಅಷ್ಟಾಗಿ ತಲೆಗೆ ಹಾಕಿಕೊಳ್ಳಲ್ಲ. ಅದರ ಬಗ್ಗೆ ವ್ಯಥೆನೂ ಪಡಲ್ಲ. ಆದರೆ ಈ ಬಾರಿ ವದಂತಿಯಲ್ಲಿ ನನ್ನ ಕುಟುಂಬವನ್ನೂ ಎಳೆದು ತಂದಿದ್ದಾರೆ. ಈ ವಿಷಯವೇ ನನ್ನ ನೋವಿಗೆ ಕಾರಣವಾಗಿರುವುದು. ಕೆಲವರು ಸತ್ಯಾಸತ್ಯತೆಗಳನ್ನು ತಿಳಿದುಕೊಳ್ಳದೆ ಈ ರೀತಿಯ ಗಾಸಿಪ್ ಸೃಷ್ಟಿಸುತ್ತಿದ್ದಾರೆ. ವಾಸ್ತವ ಏನೂಂತ ಅವರು ತಿಳಿದುಕೊಳ್ಳಬೇಕು. ಊಹಿಸಿಕೊಂಡು ಈ ರೀತಿಯ ಕಟ್ಟಕಥೆಗಳನ್ನು ಬರೆಯಬಾರದು" ಎಂದು ಅಸಹನೆಯನ್ನು ವ್ಯಕ್ತಪಡಿಸಿದ್ದಾರೆ ಶ್ರದ್ಧಾ.