`ನನ್ನ ಮುಖ, ನನ್ನ ದೇಹ ಇದು ನನ್ನಿಷ್ಟ ಏನು ಬೇಕಾದರೂ ಮಾಡಿಕೊಳ್ಳುತ್ತೇನೆ’
ಬುಧವಾರ, 7 ಜೂನ್ 2017 (13:23 IST)
ನನ್ನ ಮುಖ, ನನ್ನ ದೇಹ ಇದು ನನ್ನಿಷ್ಟ ಏನು ಬೇಕಾದರೂ ಮಾಡಿಕೊಳ್ಳುತ್ತೇನೆ. ಇದನ್ನ ಕೇಳುವ ಅಧಿಕಾರ ಯಾರಿಗೂ ಇಲ್ಲ, ನಾನ್ಯಾರಿಗೂ ಉತ್ತರ ಕೊಡಬೇಕಿಲ್ಲ ಎಂದು ನಟಿ ಶೃತಿ ಹಾಸನ್ ಖಡಕ್ಕಾಗಿ ಪ್ರತಿಕ್ರಿಯಿಸಿದ್ದಾರೆ.
ದಕ್ಷಿಣದಲ್ಲಷ್ಟೇ ಅಲ್ಲ, ಬಾಲಿವುಡ್`ನಲ್ಲೂ ಬಹಳಷ್ಟು ಅಭಿಮಾನಿಗಳನ್ನ ಹೊಂದಿರುವ ನಟಿ ಶ್ರುತಿ ಹಾಸನ್. ಇತ್ತೀಚೆಗೆ ಶ್ರುತಿ ಹಾಸನ್ ತುಟಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಸರ್ಜರಿ ಬಳಿಕ ತೆಗೆದ ಫೋಟೋಗಳನ್ನ ಸೋಶಿಯಲ್ ಮೀಡಿಯಾಗೆ ಹಾಕಿದ್ದು, ಜನರಿಂದ ಭಾರೀ ಟೀಕೆ ಕೇಳಿಬಂದಿತ್ತು. ಈ ಬಗ್ಗೆ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಶ್ರುತಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇದು ನನ್ನ ಮುಖ, ನನ್ನ ದೇಹ ನಾನು ಏನ್ ಬೇಕಾದರೂ ಮಾಡಿಕೊಳ್ಳುತ್ತೇನೆ. ಇದರ ಉಸಾಬರಿ ಬೇರಾರಿಗೂ ಬೇಕಿಲ್ಲ. ಜನ ನನ್ನ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಡಿರುವ ಕಾಮೆಂಟ್`ಗಳ ಬಗ್ಗೆ ನಾನು ಧೃತಿಗೆಟ್ಟಿಲ್ಲ. ಈ ಬಗ್ಗೆ ನಾನು ಯಾರಿಗೂ ಉತ್ತರಿಸಬೇಕಿಲ್ಲ ಎಂದಿದ್ದಾರೆ.