ಸಿದ್ಧಾರ್ಥ ಪ್ರಪೋಸಲ್‌ಗೆ ಪ್ರಿಯಾಂಕಾ ಓಕೆ ಎಂದ ಕ್ಷಣ

ಗುರುವಾರ, 16 ಫೆಬ್ರವರಿ 2017 (14:06 IST)
ಬಾಲಿವುಡ್ ನಟಿ, ಹಾಲಿವುಡ್‌ನಲ್ಲೂ ಪಾದ ಊರಿರುವ ಪ್ರಿಯಾಂಕಾ ಚೋಪ್ರಾ ಈಗ ಲವ್ವಲ್ಲಿ ಬಿದ್ದಿದ್ದಾರೆ. ಬಾಲಿವುಡ್ ನಟ, ಏಕ್ ವಿಲನ್ ಚಿತ್ರದ ಮೂಲಕ ಹೆಸರು ತಂದುಕೊಂಡ ಸಿದ್ದಾರ್ಥ ಮಲ್ಹೋತ್ರಾ ಮದುವೆ ಪ್ರಪೋಸಲ್‌ಗೆ ಓಕೆ ಎಂದಿದ್ದಾರೆ. 
 
ಇದೇನಿದು ಪ್ರಿಯಾಂಕಾ ಇಷ್ಟು ಬೇಗ ಮನಸ್ಸು ಹೃದಯ ಕೊಟ್ಟುಬಿಟ್ಟಿದ್ದಾರಾ ಎಂದು ಗಾಬರಿ ಬೀಳುವ ಅವಶ್ಯಕತೆ ಇಲ್ಲ. ಯಾಕೆಂದರೆ ಇದು ರಿಯಲ್ ಅಲ್ಲ ರೀಲ್. ನಿರವ್ ಮೋದಿ ಆಭರಣಕ್ಕೆ ಸಂಬಂಧಿಸಿದ ವಾಣಿಜ್ಯ ಜಾಹೀರಾತಿನ ಭಾಗವಾಗಿ ಈ ಸನ್ನಿವೇಶವನ್ನು ಸೆರೆಹಿಡಿದಿದ್ದಾರೆ. ಇನ್ನು ಯಾವತ್ತಿಗೂ ಯಾರಿಗೂ ಎಸ್ ಎಂದು ಹೇಳಬಾರದು ಎಂದು ನಿರ್ಧರಿಸಿದ ಒಬ್ಬ ಯುವತಿ..ತನ್ನನ್ನು ಎಂದಿನಿಂದಲೋ ಇಷ್ಟಪಡುತ್ತಿರುವ ಹುಡುಗ ನೀರವ್ ಉಂಗುರ ತಂದು ಕೊಟ್ಟಕೂಡಲೇ ಎಸ್ ಎಂದು ಹೇಳುವ ದೃಶ್ಯದಲ್ಲಿ ಅಭಿನಯಿಸಿದ್ದಾರೆ.
 
ಈ ಜಾಹೀರಾತು ಎಲ್ಲರನ್ನೂ ಆಕರ್ಷಿಸುತ್ತದೆಂದು. ನೀರವ್ ಮೋದಿ ಆಭರಣಗಳಿಗೆ ಎಂದಿಗೂ ನೋ ಹೇಳಲ್ಲ ಎಂಬ ಮಾತಿನೊಂದಿಗೆ ಈ ಜಾಹೀರಾತು ಮುಗಿಯುತ್ತದೆ. ಈ ಜಾಹೀರಾತು ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಇವರಿಬ್ಬರೂ ನಿಜವಾಗಿಯೂ ಪ್ರೀತಿಸುತ್ತಿದ್ದಾರೆ ಎಂಬರ್ಥದಲ್ಲಿ ಗಾಸಿಪ್ ಹಬ್ಬಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಮತ್ತು ಸಿದ್ಧಾರ್ಥ ಇಬ್ಬರೂ ಹೌದು ಎಂಬಂತೆ ತಮಾಷೆಯಾಗಿ ಉತ್ತರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ