ಸಿಖ್ ಸಮುದಾಯದ ಕೆಂಗಣ್ಣಿಗೆ ಗುರಿಯಾದ ದೀಪಿಕಾ - ರಣವೀರ್ ದಂಪತಿ

ಗುರುವಾರ, 22 ನವೆಂಬರ್ 2018 (06:40 IST)
ಮುಂಬೈ :  ಇತ್ತೀಚೆಗಷ್ಟೇ ವೈವಾಹಿಕಕ ಜೀವನಕ್ಕೆ ಕಾಲಿಟ್ಟ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣ್ ವೀರ್ ಸಿಂಗ್, ಸಿಂಧಿ ಸಂಪ್ರದಾಯದಂತೆ ವಿವಾಹವಾಗುವ ಮೂಲಕ ಇದೀಗ ಸಿಖ್ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹೌದು. ನಟ ನಟಿ ದೀಪಿಕಾ ಪಡುಕೋಣೆ ಹಾಗೂ ರಣ್ ವೀರ್ ಸಿಂಗ್ ನವೆಂಬರ್ 14ರಂದು ಇಟಲಿಯಲ್ಲಿ ಕೊಂಕಣಿ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ನಂತರ ನವೆಂಬರ್ 15ರಂದು ಸಿಂಧಿ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಆದರೆ ಈ ಸಂದರ್ಭದಲ್ಲಿ ಅವರು ಆನಂದ್ ಕಾರಜ್ ಸಲುವಾಗಿ ಸಿಖ್ಖರ ಪವಿತ್ರ ಗ್ರಂಥ, ಗುರು ಗ್ರಂಥ ಸಾಹೇಬ್ ಅನ್ನು ಹೊಟೇಲ್ ಕೊಠಡಿಗೆ ಕೊಂಡೊಯ್ಯಿದ್ದಾರೆ. ಇದು ಸಿಖ್ ಸಮುದಾಯವನ್ನು ಕೆರಳಿಸಿದೆ.

 

ಸಿಖ್ ಸಮುದಾಯದ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಡಲು ಈ ಜೋಡಿ ಗುರುದ್ವಾರಕ್ಕೆ ಭೇಟಿ ನೀಡಬೇಕಿತ್ತು. ಆದರೆ ಈ ಜೋಡಿ ಗುರುದ್ವಾರಕ್ಕ ಹೋಗದೆ, ಹೊಟೇಲ್ ಕೊಠಡಿಗೆ ಪವಿತ್ರ ಗ್ರಂಥವನ್ನು ತರಿಸಿಕೊಂಡಿದ್ದು, ಪವಿತ್ರ ಗ್ರಂಥಕ್ಕೆ ಅಪಮಾನ ಮಾಡಲಾಗಿದೆ ಎಂದು ಸಿಖ್ ಸಮುದಾಯದ ಆರೋಪ. ಹೀಗಾಗಿ ತಾವು ದೀಪಿಕಾ - ರಣವೀರ್ ದಂಪತಿಯ ವಿರುದ್ದ ಅಕಾಲ್ ತಖ್ತ್ ನಲ್ಲಿ ದೂರು ದಾಖಲಿಸುವುದಾಗಿ ಸಿಖ್ ಮುಖಂಡರು ಹೇಳಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ