'ಮೀಟೂ' ಆಂದೋಲನದ ಬಗ್ಗೆ ಈ ರೀತಿ ಮಾತನಾಡಿ ವಿವಾದಕ್ಕೆ ಕಾರಣರಾದ ನಟಿ ಪ್ರೀತಿ ಝಿಂಟಾ

ಬುಧವಾರ, 21 ನವೆಂಬರ್ 2018 (07:55 IST)
ಮುಂಬೈ : ಮೀಟೂ ಅಭಿಯಾನ ಮಹಿಳೆಯರಿಗೆ ತಮ್ಮ ಮೇಲಾದ ಲೈಂಗಿಕ ದೌರ್ಜನ್ಯವನ್ನು ಹೇಳಿಕೊಳ್ಳಲು ಇರುವ ವೇದಿಕೆಯಾಗಿದೆ. ಆದರೆ ಬಾಲಿವುಡ್ ನಟಿ ಪ್ರೀತಿ ಝಿಂಟಾ 'ಮೀಟೂ' ಆಂದೋಲನದ ಬಗ್ಗೆ ಮಾತನಾಡಿ ವಿವಾದಕ್ಕೆ ಕಾರಣರಾಗಿದ್ದಾರೆ.


ಹೌದು. ನಟಿ ಪ್ರೀತಿ ಝಿಂಟಾ 'ಬಾಲಿವುಡ್‌ ಹಂಗಾಮಾ' ಎಂಬ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ 'ನಿಮಗೇನಾದರೂ ಮೀ ಟೂ ಅನುಭವ ಆಗಿದೆಯಾ?' ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಪ್ರೀತಿ ಝಿಂಟಾ, 'ಬಾಲಿವುಡ್‌ ಸುರಕ್ಷಿತ ಸ್ಥಳ. ಇಲ್ಲಿ ಯಾವುದೇ ಲೈಂಗಿಕ ಶೋಷಣೆ ನಡೆಯಲ್ಲ. ಕೆಲವರು ಪ್ರಚಾರಕ್ಕೆ ಆರೋಪಗಳನ್ನು ಮಾಡುತ್ತಾರೆ' ಎಂದು ಟೀಕಿಸಿದರು.


'ನಾನಂತೂ ಯಾವತ್ತೂ ಲೈಂಗಿಕ ಶೋಷಣೆಗೆ ಒಳಗಾಗಿಲ್ಲ. ಒಂದು ವೇಳೆ ಶೋಷಣೆಗೆ ಒಳಗಾಗಿದ್ದರೆ ನಿಮ್ಮ ಪ್ರಶ್ನೆಗೆ ನನ್ನಲ್ಲಿ ಉತ್ತರ ಇರುತ್ತಿತ್ತು’ ಎಂದ ಅವರು 'ಇಂದಿನ ಸ್ವೀಟಿಯೇ ನಾಳೆಯ ಮೀಟೂ ಆಗಬಹುದು' ಎಂದು ಹೇಳಿದ್ದಾರೆ. ಇದೀಗ ಅವರ ಹೇಳಿಕೆಯ ಬಗ್ಗೆ ಬಾರೀ ವಿರೋಧ ವ್ಯಕ್ತವಾಗಿದೆ. ಆದರೆ ನಟಿ ಪ್ರೀತಿ ಝಿಂಟಾ ಮಾತ್ರ ತಮ್ಮ ಸಂದರ್ಶನ ತಿರುಚಿ ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ