ಸಲ್ಮಾನ್ ಖಾನ್ ಮನದಲ್ಲಿ ಅಡಗಿರುವ ಬಹುಮುಖ್ಯ ಸಂಗತಿಗಳ ವಿವರ ..!

ಶನಿವಾರ, 19 ಜುಲೈ 2014 (11:52 IST)
ಸಲ್ಮಾನ್ ಖಾನ್ ಬಾಲಿವುಡ್ ಗೆ ಪ್ರವೇಶ ಮಾಡಿ ಅದಾಗಲೇ ಇಪ್ಪತ್ತು ವರ್ಷಗಳು ಆಗಿವೆ. ಆದರು ಸಹ ಆತನ ಬಗ್ಗೆ ಜನರಿಗೆ ಕ್ರೇಜ್ ಕಡಿಮೆ ಆಗಿಲ್ಲ. 

ಅನೇಕ ಟಾಪ್ ಹೀರೋಯಿನ್ ಗಳ ಜೊತೆ ಡೇಟಿಂಗ್ ಮಾಡಿದ ಸಂಗತಿಯು ಸದಾ ಮೀಡಿಯಾಗಳಲ್ಲಿ ಸುದ್ದಿ ಆಗ್ತಾನೆ ಇರುತ್ತದೆ. ಆದರೂ ಸಹ ಆತನ ಬಾಳನ್ನು ಬೆಳಗುವ ಯಾವ ಹೆಣ್ಣುಮಗಳು ಇನ್ನು ದೊರಕದೆ ಇರುವುದು ಅತ್ಯಂತ ಆಶ್ಚರ್ಯಕರ ಸಂಗತಿ ಆಗಿದೆ. ಈ ಬೈಸೆಪ್ಸ್  ಹೀರೋಗೆ ಇರುವ ಭಾವನೆಗಳನ್ನು ಒಳ ಹೊಕ್ಕು ನೋಡಿ ಅದನ್ನು ಜಗತ್ತಿಗೆ ತಿಳಿಸಿದ್ದಾರೆ ಒಂದು  ಪತ್ರಿಕೆಯವರು. ಅವರು ಮಾಡಿದ ಸಂದರ್ಶನದಲ್ಲಿ ಅನೇಕ ಆಸಕ್ತಿಕರ ಸಂಗತಿಗಳು ಹೊರ ಬಿದ್ದಿವೆ. 
 
ಎಲ್ಲರಂತೆ ತನಗೂ ಸಹ ಮದುವೆ ಮಕ್ಕಳು ನನ್ನದೇ ಕುಟುಂಬ ಎನ್ನುವುದರ ಬಗ್ಗೆ ಕನಸಿದೆ.  ನಾನು ನನ್ನ ಮಕ್ಕಳಿಗೆ ಒಳ್ಳೆಯ ತಂದೆ ಆಗ ಬಹುದೇ ವಿನಃ ಒಳ್ಳೆಯ ಪತಿ ಆಗಲಾರೆ ನನ್ನ ಪತ್ನಿಗೆ. ಆದ್ದರಿಂದ ಮದುವೆಗೆ ಸಂಬಂಧಪಟ್ಟಂತೆ  ನಾನು ಯಾವುದೇ ಬಗೆಯ ನಿರ್ಣಯಗಳನ್ನು ಹೊಂದಲು ಸಾಧ್ಯವಿಲ್ಲ ಎಂದಿದ್ದಾರೆ ಸಲ್ಮಾನ್ ಖಾನ್.
 
ಅಕಸ್ಮಾತ್ ನಾನು ಮಕ್ಕಳಿಗಾಗಿ ಮದುವೆ ಆದರೂ ಸಹ ನನಗೆ ಹುಟ್ಟುವ ಮಕ್ಕಳು 25 ವರ್ಷ ಆಗುವಷ್ಟರಲ್ಲಿ ನನಗೆ 80 ವರ್ಷ ಆಗಿರುತ್ತದೆ. ಒಂದು ವೇಳೆ ನಾನು 70 ವರ್ಷದಲ್ಲಿ ಸತ್ತು ಹೋದರೆ ನನ್ನ ಮಕ್ಕಳಿಗೆ ಆಗ ಕೇವಲ 15ವರ್ಷಗಳು ಆಗಿರುತ್ತದೆ. ಅವರು ತಂದೆ ಇಲ್ಲದ ಮಕ್ಕಳಾಗುತ್ತಾರೆ  . ಆದ್ದರಿಂದ ನನಗೆ ಮದುವೆ ಮತ್ತು ಮಕ್ಕಳು ಎಂದರೆ ಭಯವಾಗುತ್ತದೆ ಎಂದಿದ್ದಾರೆ ಸಲ್ಮಾನ್ . 
ಹೋಗ್ಲಿ ಬಾಡಿಗೆ ತಾಯಿ ಮುಖಾಂತರ ಮಗುವನ್ನು ಪಡೆಯೋಣ ಎಂದರೆ ಆ ಮಗು ದೊಡ್ಡದಾದ ಬಳಿಕ ಎಲ್ಲಿ ನಮ್ಮ ಅಮ್ಮ ಅಂದ್ರೆ ಅದಕ್ಕೆ ನಾನು ಯಾವ ಉತ್ತರ ಹೇಳಲಿ,  ಈ ನೋವು ನನ್ನನ್ನು ಕಾಡುತ್ತಿದೆ. ನನಗೆ ಮಕ್ಕಳು ಅಂದ್ರೆ ಪ್ರಾಣ ಆದರೆ ಅವುಗಳನ್ನು ಪಡೆಯದ ಸ್ಥಿತಿಯಲ್ಲಿ ಇಲ್ಲ ಎಂದು ಹೇಳಿದ್ದಾರೆ ಸಲ್ಮಾನ್. 
 
ಬಾಲಿವುಡ್ ನಲ್ಲಿ ಕೋಟಿಗಟ್ಟಲೆ ಹಣವನ್ನು ಸಂಪಾದಿಸುತ್ತಿರುವ ಸಲ್ಮಾನ್ ಖಾನ್ ಮನದಲ್ಲಿ ಇಂತಹ ಸೂಕ್ಮವಾದ ಸಂಗತಿಗಳು ಅಡಗಿವೆ ಎನ್ನುವುದು ಕೇವಲ ಅವರ ಡೇಟಿಂಗ್ ವಿಷ್ಯ ಓದುವ ನಮಗೆ ಅಚ್ಚರಿ  ಆಗುತ್ತದೆ. ಸಲ್ಮಾನ್ ಸಹ ಮನುಷ್ಯ ಅಲ್ಲವೇ!

ವೆಬ್ದುನಿಯಾವನ್ನು ಓದಿ