ದೃಶ್ಯಂ ಹಿಂದಿ ಅವತರಣಿಕೆಯಲ್ಲಿ ಸೋನಾಕ್ಷಿ ಸಿನ್ಹಾ

ಶುಕ್ರವಾರ, 28 ನವೆಂಬರ್ 2014 (11:01 IST)
ಕನ್ನಡದಲ್ಲಿ ರವಿಚಂದ್ರನ್ ನಟಿಸಿದ್ದ ರೀಮೇಕ್ ದೃಶ್ಯ ಚಿತ್ರದ ಮೂಲ ಮಲೆಯಾಳಂ ಚಿತ್ರವಾಗಿತ್ತು. ಆ ಮೂಲ ಚಿತ್ರ ದೃಶ್ಯಂನಲ್ಲಿ ಮೋಹನ್ ಲಾಲ್ ಅವರು ನಟಿಸಿದ್ದರು. ಅದು ಸೂಪರ್ ಡೂಪರ್ ಹಿಟ್ ಆಗಿತ್ತು. ಅದಾದ ಬಳಿಕ , ಕನ್ನಡ, ತೆಲುಗು ಭಾಷೆಗಳಲ್ಲಿ ಸಹಿತ ಬಿಡುಗಡೆ ಆಗಿ ಅಲ್ಲಿಯೂ ಅಭೂತಪೂರ್ವ ಯಶಸ್ಸುಕಂಡಿತ್ತು. 

ಈಗ ತಮಿಳಿನಲ್ಲಿ ಪಾಪನಾಸನಂ ಹೆಸರಿನ ಮೂಲಕ ಕಮಲ್ ಹಾಸನ್ ಅಭಿನಯದಲ್ಲಿ ದೃಶ್ಯಂ ರೀಮೇಕ್ ಆಗುತ್ತಿದೆ. ಗೌತಮಿ ಈ ಚಿತ್ರದ ಮುಖ್ಯ ಪಾತ್ರಧಾರಿ ಆಗಿದ್ದಾರೆ. ಇದೆ ಚಿತ್ರ ಈಗ ಹಿಂದಿಯಲ್ಲಿ ನಿರ್ಮಾಣ ಆಗುತ್ತಿದೆ. ಈ ಚಿತ್ರದಲ್ಲಿ ಅಜಯ್ ದೇವಗನ್ ಹೀರೋ ಆಗಿದ್ದಾರೆ.ಸಾಮಾನ್ಯವಾಗಿ ದಕ್ಷಿಣ ಭಾರತ ಸಿನಿಮಾಗಳನ್ನು  ರೀಮೇಕ್ ಮಾಡಿ ಗೆಲ್ಲುವ ಅಜಯ್ ಅವರು ಈಗ ದೃಶ್ಯಂ ಕಡೆ ಕೈ ಚಾಚಿದ್ದಾರೆ. ಅವರ ಜೊತೆ ಬಾಲಿವುಡ್ ಮುದ್ದು ನಟಿ ಸೋನಾಕ್ಷಿ ಸಿನ್ಹ ನಟಿಸುತ್ತಿದ್ದಾಳೆ. 
 
ಕಥೆಯಲ್ಲಿ ಸ್ವಲ್ಪ ಮಾರ್ಪಾಟು ಮಾಡಿ, ಕ್ಲಾಸ್ ಮತ್ತು ಮಾಸ್ ಇಬ್ಬರಿಗೂ ಇಷ್ಟ ಆಗುವಂತೆ ಸಿದ್ಧ ಮಾಡುತ್ತಿದ್ದರಂತೆ. ಅದರ ಬಗ್ಗೆ ಇರುವ ಸಂಗತಿಗಳು ಸದ್ಯಕ್ಕೆ ಬಿ ಟೌನ್ ವಾಸಿಗಳಿಗೆ ಗೊತ್ತಾಗಿಲ್ಲ. ಅವರು ತಮಗೇನು ಗೊತ್ತಿದೆಯೋ ಅದನ್ನು ಹೇಳಿದ್ದಾರೆ.. ಅದನ್ನೇ ನಾವು ನಿಮಗೆ ತಿಳಿಸಿದ್ದೇವೆ! 

ವೆಬ್ದುನಿಯಾವನ್ನು ಓದಿ