ಸೋನಾಕ್ಷಿ ಸಿನ್ಹಾ ಆ ದಿನ ಅಷ್ಟೊಂದು ಕಷ್ಟ ಪಟ್ಟಿದ್ಯಾಕೆ ?

ಗುರುವಾರ, 16 ಏಪ್ರಿಲ್ 2015 (10:37 IST)
ಜನದಟ್ಟಣೆ ಇರುವಂತಹ  ಮುಂಬೈ ಬೀದಿಗಳು, ಸುತ್ತಲೂ ಜನರ ಪ್ರವಾಹ. ಬಾಲಿವುಡ್ ಮುದ್ದು ಮುದ್ದಾದ ಚೆಲುವೆ ಸೋನಾಕ್ಷಿ ಸಿನ್ಹಾ ಧರಣಿ ಮಾಡುತ್ತಾ ಇರುವುದು ಕಂಡು ಬರುತ್ತಿದೆ. 

ಮೇಲೆ ಸೂರ್ಯ ಬಿಸಿಲು ಚೆಲ್ಲುತ್ತಿದ್ದರೆ, ಪಕ್ಕದಲ್ಲಿ ಟಿಯರ್ ಗ್ಯಾಸ್  ಹೊರ ಹೊಮ್ಮುತ್ತಿದೆ. ಯಾವುದೇ ಎಗ್ಗಿಲ್ಲದೆ ರಸ್ತೆ ಮಧ್ಯೆ ನಿಂತು ಧ್ವನಿಗೈಯ್ಯುತ್ತಿದೆ. ಸ್ಟಾರ್ ಜೀವನ, ಐಶಾರಾಮಿ ಬದುಕು ನಡೆಸಿದ ಆ ಚೆಲುವೆಗೆ ಯಾಕೆ ಇಂತಹ ಪರಿಸ್ಥಿತಿ? ಆಕೆ ರಸ್ತೆಗೆ ಇಳಿಯುವುದರ ಹಿಂದಿನ ಕಾರಣವಾದರೂ ಏನು? 
 
ಸ್ವಲ್ಪ ತಡೆಯಿರಿ ಇವೆಲ್ಲ ರಿಯಲ್ಲಾಗಿದ್ದರೂ ಅದು ರೀಲ್ ನ ಒಂದು ಭಾಗ. ಈಗ ಈ ಮುದ್ದು ಹುಡುಗಿ ಅಕಿರಾ ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಅದಕ್ಕಾಗಿ ಇಷ್ಟೆಲ್ಲಾ ಕಷ್ಟ ಪಟ್ಟಿದ್ದಾಳೆ ಎಂದು ಆಂಗ್ಲ ಪತ್ರಿಕೆ ವಿವರಿಸಿದ್ದು ಹೀಗೆ! 
 
ಎ ಮುರುಗದಾಸ್ ಅವರ ನಿರ್ದೇಶನದ ಈ ಸಿನಿಮಾಗೆಂದು ಸೋನು ಮಾರ್ಷಲ್ ಆರ್ಟ್ಸ್ ಸಹ ಪ್ರಾಕ್ಟೀಸ್ ಮಾಡಿದ್ದಾಳಂತೆ. ಆಕೆ ನಿಜ ತಂದೆ ಶತ್ರುಘ್ನ ಸಿನ್ಹಾ ಸಹಿತ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ