ತನ್ನದೇ ಆ್ಯಪ್ ಬಿಡುಗಡೆ ಮಾಡಿದ ಸೋನಮ್

ಶನಿವಾರ, 30 ಏಪ್ರಿಲ್ 2016 (18:03 IST)
ಬಾಲಿವುಡ್ ನಟಿ ಸೋನಮ್ ಕಪೂರ್ ತಮ್ಮದೇ ಆದ ಆ್ಯಪ್ ಬಿಡುಗಡೆ ಮಾಡಿದ್ದಾರೆ. ತಮ್ಮ ಅಪ್ಲೀಕೇಷನ್‌ನನ್ನು ಇಂದು ಸೋನಮ್ ಬಿಡುಗಡೆ ಮಾಡಿದರು..ಇದೇ ವೇಳೆ ಮಾತನಾಡಿದ ಸೋನಮ್  ನನ್ನ ಹಾಗೂ ಫ್ಯಾನ್ ಗಳ ಮಧ್ಯೆ ಸಹಾಯಕಾರಿಯಾಗಲಿದೆ ಎಂದು ಹೇಳಿದರು.
ನಿರ್ಜಾ ಚಿತ್ರದ ನಟಿ ಸೋನಮ್  ಅಭಿಮಾನಿಗಳು ಈ ಆ್ಯಪ್‌ಗೆ ಹೋಗಿ ಅಲ್ಲಿರುವ ಸೋನಮ್ ಚಿತ್ರಗಳನ್ನು ಅಪಲೋಡ್ ಮಾಡಬಹುದು. ಸೋನಮ್ ಫೋಟೊ, ವಿಡಿಯೋ, ಅಲ್ಲದೇ ಮ್ಯೂಸಿಕ್ ನ್ನೂ ಆಕ್ಸೆಸ್ಸ್ ಮಾಡಬಹುದು. 
 
ಇದ್ದರಿಂದ ಸೋನಮ್ ತಮ್ಮ ಪ್ಯಾನ್‌‌ಗಳ ಜತೆಯಲ್ಲಿ ಲೈವ್ ಆಗಿ ಕಾಣಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ ಸೋನಮ್ ಕಪೂರ್.. 30 ವರ್ಷದ ಸೋನಮ್, ಮೊಬೈಲ್ ಅಪ್ಲೀಕೆಷನ್ ಲಾಂಚ್ ಸಮಾರಂಭದ ವೇಳೆ ಈ ಮಾತುಗಳನ್ನಾಡಿದ್ದಾರೆ. ನನಗೆ ಯಾವುದು ಇರುಸುಮುರುಸು ಆಗುವುದಿಲ್ಲವೋ ಅಂಥ ವಿಷ್ಯದ ಬಗ್ಗೆ ನಾನು ಮಾತನಾಡಲು ಇಚ್ಛೀಸುತ್ತೇನೆ ಎಂದು ತಿಳಿಸಿದ್ದಾರೆ. 

ಸೋನಮ್ ಕಪೂರ್ ಅಭಿನಯದ ಚಿತ್ರದಲ್ಲಿ ನಿರ್ಜಾ ಭಾನೋತ್ ಅವರ ಕಥೆ ಆಧಾರಿತವಾಗಿದ್ದು, ಕರಾಚಿಯಲ್ಲಿ ವಿಮಾನವನ್ನು ಹೈಜಾಕ್ ಮಾಡಲಾಗಿತ್ತು. ಆ ವೇಳೆ ತನ್ನ ಪ್ರಾಣವನ್ನು ಲೆಕ್ಕಿಸದೇ ನಿರ್ಜಾ ವಿಮಾನದಲ್ಲಿದ್ದವರನ್ನು ರಕ್ಷಣೆ ಮಾಡಿದ್ದಳು ನಿರ್ಜಾ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ