ಹಾಲಿವುಡ್ ಚಿತ್ರಗಳಲ್ಲಿ ನಟಿಸುತ್ತಿರುವುದರ ಬಗ್ಗೆ ಅಲ್ಲಗಳೆದ ನಟಿ ಸೋನಮ್

ಶುಕ್ರವಾರ, 2 ಸೆಪ್ಟಂಬರ್ 2016 (18:32 IST)
ಬಾಲಿವುಡ್‌ನ ಪ್ರತಿಭಾವಂತ ನಟಿ ಸೋನಮ್ ಕಪೂರ್ ಇತ್ತೀಚೆಗೆ ಅವರು ಯುನಿಟೆಡ್ ಟ್ಯಾಲೆಂಟ್ ಏಜೆನ್ಸಿ ಅಮೇರಿಕಾದ ಟಾಪ್ ಟ್ಯಾಲೆಂಟ್ ಪ್ರಾಜೆಕ್ಟ್‌ಗೆ ಸಹಿ ಹಾಕಿದ್ದಾರೆ ಎನ್ನಲಾಗುತ್ತಿತ್ತು. ಸೋನಮ್ ಕಪೂರ್ ಹಾಲಿವುಡ್ ಪ್ರೊಜೆಕ್ಟ್ ನಲ್ಲಿ ನಟಿಸುತ್ತಿದ್ದಾರೆ. ಶೀಘ್ರವೇ ಅವರು ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಗಾಳಿ ಸುದ್ದಿ ಹರಡಿತ್ತು.

 
ಆದ್ರೆ ಇದೀಗ ಟ್ವಿಟರ್ ಮೂಲಕ ಸೋನಮ್ ಸ್ಪಷ್ಟನೆ ನೀಡಿದ್ದಾರೆ. ತಾವು ಯಾವುದೇ ಹಾಲಿವುಡ್ ಪ್ರೊಜೆಕ್ಟ್‌ಗೆ ಸಹಿ ಹಾಕಿಲ್ಲ ಎಂದು ತಿಳಿಸಿದ್ದಾರೆ. ನಾನು ಸ್ಪಷ್ಟವಾಗಿ ತಿಳಿಸಲು ಇಚ್ಛಿಸುತ್ತೇನೆ, ಯಾವುದೇ ಚಿತ್ರಕ್ಕೂ ಸಹಿ ಹಾಕಿಲ್ಲ ಎಂದು ಟ್ವಿಟರ್‌ನಲ್ಲಿ ಸೋನಮ್ ಬರೆದುಕೊಂಡಿದ್ದಾರೆ. 

ಬಾಲಿವುಡ್ ಖ್ಯಾತ ನಟ ಅನಿಲ್ ಕಪೂರ್ ಹಾಗೂ ಸುನೀತಾ ಕಪೂರ್ ದಂಪತಿಯ ಮೊದಲನೇಯ ಪುತ್ರಿ ಸೋನಮ್ ಪ್ರೇಮ್ ರತನ್ ಧನ್ ಪಾವೋ, ನಿರ್ಜಾ, ಚಿತ್ರದ ಮೂಲಕ ಗಮನ ಸೆಳೆದಿದ್ದರು.

ಇನ್ನೂ ಮುಂಬರುವ ಚಿತ್ರ ವೀರ್ ದಿ ವೆಡ್ಡಿಂಗ್ ಚಿತ್ರದಲ್ಲಿ ಸೋನಮ್ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕರೀನಾ ಕಪೂರ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸ್ವರಾ ಹಾಗೂ ಕರೀನಾ ಜತೆಗೆ ಸೋನಮ್ ಮಿಂಚಲಿದ್ದಾರೆ. ಈಗಾಗ್ಲೇ ಶೂಟಿಂಗ್ ಆರಂಭಗೊಂಡಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ