ಉಡಾಫೆಯಿಂದ ಇರ್ಫಾನ್ ಖಾನ್ ಗೆ ಅಂತಿಮ ಗೌರವ ಸಲ್ಲಿಸಿದ ಸೋನು ನಿಗಂ ಮೇಲೆ ಟೀಕೆ

ಗುರುವಾರ, 30 ಏಪ್ರಿಲ್ 2020 (09:29 IST)
ಮುಂಬೈ: ನಿನ್ನೆಯಷ್ಟೇ ನಿಧನರಾದ ಬಾಲಿವುಡ್ ನಟ ಇರ್ಫಾನ್ ಖಾನ್ ಗೆ ಸೆಲೆಬ್ರಿಟಿಗಳು ಗೌರವದಿಂದಲೇ ಸಂತಾಪ ಸೂಚಿಸಿದ್ದಾರೆ. ಆದರೆ ಗಾಯಕ ಸೋನು ನಿಗಂ ಗೌರವ ಸಲ್ಲಿಸಿದ ಪರಿಗೆ ನೆಟ್ಟಿಗರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


ತಮ್ಮ ಫೇಸ್ ಬುಕ್ ಪುಟದಲ್ಲಿ ಇರ್ಫಾನ್ ಖಾನ್ ನಿಧನಕ್ಕೆ ಸಂತಾಪ ಸೂಚಿಸಿ ವಿಡಿಯೋ ಸಂದೇಶ ನೀಡುವಾಗ ಸೋನು ನಿಗಂ ಉಡಾಫೆಯಿಂದ ನಿಂತುಕೊಂಡು ನಗುತ್ತಾ, ಒಂದು ರೀತಿ ಕುಹುಕ ಮಾಡುವ ಮುಖಭಾವದಲ್ಲಿ ಅಂತಿಮ ನಮನ ಸಲ್ಲಿಸಿದ್ದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮೊದಲು ನಗುವುದನ್ನು ನಿಲ್ಲಿಸಿ. ಇದು ಕಂಬಿನಿ ಮಿಡಿಯುವ ಪರಿಯಾ? ನಿಧನರಾದ ಪ್ರತಿಭಾವಂತ ನಟನಿಗೆ ಅವಮಾನ ಮಾಡಬೇಡಿ. ಇಷ್ಟೊಂದು ಉಡಾಫೆ ಏಕೆ ಎಂದು ಹಲವರು ಕಾಮೆಂಟ್ ಮಾಡಿ ಸೋನು ನಿಗಂರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ