ನಟಿ ಮಾನ್ವಿತಾ ಕಾಮತ್ ತಾಯಿಗೆ ನೆರವಾದ ಸೋನು ಸೂದ್

ಗುರುವಾರ, 25 ಆಗಸ್ಟ್ 2022 (16:17 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಮಾನ್ವಿತಾ ಕಾಮತ್ ತಾಯಿ ಚಿಕಿತ್ಸೆಗೆ ಬಾಲಿವುಡ್ ನಟ ಸೋನು ಸೂದ್ ನೆರವಾಗಿದ್ದು, ಈ ವಿಚಾರವನ್ನು ಖುದ್ದು ಮಾನ್ವಿತಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮಾನ್ವಿತಾ ತಾಯಿ ಕಿಡ್ನಿ ವೈಫಲ್ಯಕ್ಕೊಳಗಾಗಿದ್ದು, ಅವರ ಚಿಕಿತ್ಸೆಗೆ ವೈದ್ಯರ ಬಗ್ಗೆ ಸಲಹೆ ನೀಡುವಂತೆ ಮಾನ್ವಿತಾ ಕೇಳಿಕೊಂಡಿದ್ದರು. ಇದನ್ನು ಗಮನಿಸಿದ ಸೋನು ಸೂದ್ ಮಾನ್ವಿತಾ ತಾಯಿ ಚಿಕಿತ್ಸೆಗೆ ನೆರವಾಗಿದ್ದಾರೆ.

ಇದೀಗ ಸೋನು ಸೂದ್ ಸಂಸ್ಥೆಯ ನೆರವಿನಿಂದ ಅವರ ತಾಯಿಗೆ ನೆರವಾಗಿದೆ. ಸ್ವತಃ ತಾವೇ ಖುದ್ದಾಗಿ ಸಮಸ್ಯೆ ತಿಳಿದು ಸಹಾಯ ಮಾಡಿದ ಸೋನು ಸೂದ್ ಗೆ ಮಾನ್ವಿತಾ ಕರೆ ಮಾಡಿ ಧನ್ಯವಾದ ತಿಳಿಸಿದ್ದಾರಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ