ಕೊರೋನಾ ವಾರಿಯರ್ ನಟ ಸೋನು ಸೂದ್ ಗೂ ತಗುಲಿದ ಸೋಂಕು

ಭಾನುವಾರ, 18 ಏಪ್ರಿಲ್ 2021 (10:58 IST)
ಮುಂಬೈ: ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಸ್ವಂತ ಖರ್ಚಿನಿಂದ ಸಾವಿರಾರು ಕಾರ್ಮಿಕರಿಗೆ ನೆರವಾಗಿದ್ದಲ್ಲದೆ, ಈಗಲೂ ಕೊರೋನಾದಿಂದ ಸಂಕಷ್ಟಕ್ಕೀಡಾದವರ ನೆರವಿಗೆ ಬರುತ್ತಿರುವ ಬಾಲಿವುಡ್ ನಟ ಸೋನು ಸೂದ್ ಗೆ ಈಗ ಕೊರೋನಾ ಸೋಂಕು ತುಗಲಿದೆ.

 

ಲಾಕ್ ಡೌನ್ ಬಳಿಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸೋನು ಸೂದ್ ಜನರ ಪಾಲಿಗೆ ರಿಯಲ್ ಹೀರೋ ಆಗಿದ್ದರು. ಜನರ ಸಂಪರ್ಕದಿಂದ ದೂರವಿರಲು ನನಗೆ ಸಾಧ್ಯವಾಗಲಿಲ್ಲ. ಹೀಗಾಗಿ ನನಗೂ ಕೊರೋನಾ ಸೋಂಕು ತಗುಲಿದೆ ಎಂದು ಸೋನು ಟ್ವೀಟ್ ಮಾಡಿದ್ದಾರೆ.

ಆದರೆ ಕೊರೋನಾ ಬಂದರೂ ಸುಮ್ಮನಿರದ ಸೂನು ಸೂದ್, ಈಗಲೂ ಜನರು ಸಹಾಯ ಕೇಳಿದರೆ ನನ್ನಿಂದಾದ ಸಹಾಯ ಮಾಡಲು ಸಿದ್ಧ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ