ಕಾಫಿ ವಿತ್ ಕರಣ್ ನೂರನೇ ಎಪಿಸೋಡ್ ನ ಅತಿಥಿ ಯಾರು ಗೊತ್ತಾ?

ಶನಿವಾರ, 3 ಡಿಸೆಂಬರ್ 2016 (08:27 IST)
ಮುಂಬೈ: ಚಿತ್ರ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋ 100 ನೇ ಎಪಿಸೋಡ್ ನ ಸಂಭ್ರಮದಲ್ಲಿದೆ. ಅದರ ನೂರನೇ ಸಂಚಿಕೆಯ ವಿಶೇಷ ಅತಿಥಿ ಯಾರು ಗೊತ್ತಾ? ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್.

ಸಲ್ಮಾನ್ ಜತೆಗೆ ಅವರ ಸಹೋದರ ಸೊಹೈಲ್ ಮತ್ತು ಅರ್ಬಾಜ್ ಖಾನ್ ಕೂಡಾ ಪಾಲ್ಗೊಳ್ಳಲಿದ್ದಾರೆ. ಇದರ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಸ್ವತಃ ಸಲ್ಮಾನ್ ತಮ್ಮ ಟ್ವಿಟರ್ ಖಾತೆಯಲ್ಲಿ ಫೋಟೋ ಪ್ರಕಟಿಸಿದ್ದಾರೆ.

ಕರಣ್ ಜೋಹರ್ ಈ ಶೋನಲ್ಲಿ ಅತಿಥಿಗಳ ವೈಯಕ್ತಿಕ ಜೀವನವನ್ನೂ ಕೆದಕಿ ತೆಗೆಯುವುದರಲ್ಲಿ ಹೆಸಸರು ವಾಸಿ. ಹಾಗಾಗಿ ಸಲ್ಮಾನ್ ಗರ್ಲ್ ಫ್ರೆಂಡ್ ಗಳ ಬಗ್ಗೆ ಬಾಯಿಬಿಡುತ್ತಾರಾ ಎನ್ನುವ ಕುತೂಹಲ ಪ್ರೇಕ್ಷಕರದ್ದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ