ಬೈಕ್ ಸವಾರಿ ಮಾಡಿದ ಶ್ರೀದೇವಿ - ವೈರಲ್ ವಿಡಿಯೋ

ಅತಿಥಾ

ಗುರುವಾರ, 1 ಮಾರ್ಚ್ 2018 (18:56 IST)
ಕಳೆದ ಶನಿವಾರ ರಾತ್ರಿ ದುಬೈನಲ್ಲಿ ಸಾವನ್ನಪ್ಪಿದ ಭಾರತದ ಮೊಟ್ಟ ಮೊದಲ ಮಹಿಳಾ ಸೂಪರ್ ಸ್ಟಾರ್ ನಟಿ ಶ್ರೀದೇವಿ ಅಂತ್ಯ ಸಂಸ್ಕಾರಗಳು ನಿನ್ನೆ ಮುಂಬೈನಲ್ಲಿ ಆಕೆಯ ಇಷ್ಟದಂತೇ ನೆರವೇರಿದೆ. ನಟಿ ಶ್ರೀದೇವಿ ಅವರ ಸಾವು ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಆಘಾತಕಾರಿಯಾಗಿದೆ.
ಆಕೆಯ ಹಿರಿಯ ಮಗಳು ಜಾಹ್ನವಿಯ ಚೊಚ್ಚಲ ಸಿನೆಮಾದ ಯಶಸ್ಸನ್ನು ನೋಡುವುದು ಶ್ರೀದೇವಿ ಕನಸುಗಳಲ್ಲಿ ಒಂದಾಗಿತ್ತು. 
ಜಾಹ್ನವಿ ಕಪೂರ್ ಮತ್ತು ಇಶಾನ್ ಖಟ್ಟರ್ ಅವರ ಚೊಚ್ಚಲ ಚಿತ್ರ ಧಡಕ್‌‌ ಜುಲೈ 6, 2018 ಕ್ಕೆ ಬಿಡುಗಡೆಯಾಗಿಲಿದೆ. 'ದಡಕ್' ಮರಾಠಿ ಚಿತ್ರ 'ಸೈರಟ್' ಚಿತ್ರದ ರಿಮೇಕ್ ಆಗಿದೆ. 
 
ಶ್ರೀದೇವಿ, ಮಗಳು ಜಾಹ್ನವಿ ಜೊತೆಗೆ ಬೈಕ್ ಸವಾರಿ ಮಾಡುತ್ತಿರುವ ವಿಡಿಯೋ ಒಂದು ಈಗ ವೈರಲ್ ಆಗಿದೆ. ಜಾಹ್ನವಿಯ ಚೊಚ್ಚಲ ಚಿತ್ರ ಧಡಕ್‌ಗಾಗಿ ಕಳೆದ ವರ್ಷವೇ ಜಾಹ್ನವಿ ಬೈಕ್ ರೈಡಿಂಗ್ ತರಬೇತಿ ಪಡೆದಿದ್ದಳು. ಆ ಸಮಯದಲ್ಲಿ ಚಿತ್ರೀಕರಿಸಿದ ವಿಡಿಯೋ ಇದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ