ಕೋರಿಯೋಗ್ರಾಫರ್ ಆದ ನಟ ಶಿವರಾಜ್‌ಕುಮಾರ್

ಶನಿವಾರ, 23 ಜುಲೈ 2016 (12:44 IST)
ಸ್ಯಾಂಡಲ್‌ವುಡ್‌ಲ್ಲಿ ಹಲವು ನಟರು ಸಿಂಗರ್ ಆಗೋದು, ನಿರ್ದೇಶನ ಮಾಡುವುದು ಹಾಗೂ ಮ್ಯೂಸಿಕ್ ಕಂಪೋಸರ್ ಆಗುವುದು ಹೊಸತೇನಲ್ಲ.. ಚಿತ್ರರಂಗದಲ್ಲಿ ನಟರು ಕೇವಲ ನಟನೆಗೆ ಸೀಮಿತವಾಗಿಲ್ಲ. ತಾಂತ್ರಿಕ ಕೌಶಲ್ಯಗಳನ್ನು ಹೊಂದಿ ನಟರಾಗಿರುವುದನ್ನು ಕೇಳಿದ್ದೇವೆ. ಇದೀಗ ಕನ್ನಡದ ಖ್ಯಾತ ನಟ ಶಿವರಾಜ್ ಕುಮಾರ್ ಕೋರಿಯೋಗ್ರಾಫರ್ ಆಗಿದ್ದಾರೆ. 


ತಮ್ಮದೇ ಚಿತ್ರದ ಹಾಡಿಗೆ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ ಶಿವಣ್ಣ.. 'ಸಂತೆಯಲ್ಲಿ ನಿಂತ ಕಬೀರ್' ಚಿತ್ರದಲ್ಲಿ ಶಿವರಾಜಕುಮಾರ್ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ತಮ್ಮ ಹಾಡಿಗೆ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ.. ಮುಂದಿನ ವಾರದಂದು ಈ ಚಿತ್ರ ಬಿಡುಗಡೆ ಆಗಲಿದೆ.
 
ಚಿತ್ರಕ್ಕೆ ಇಸ್ಮಾಯಿಲ್ ದರ್ಬಾರ್ ಸಾಂಗ್ ಕಂಪೋಸ್ ಮಾಡಿದ್ದಾರೆ.. ಈ ಹಾಡನ್ನು ಚಿಕ್ಕಮಂಗಳೂರಲ್ಲಿ ಚಿತ್ರೀಕರಿಸಲಾಗಿದೆ. ಇದೊಂದು ಮೆಲೋಡಿಯಸ್ ಹಾಗೂ ರೋಮ್ಯಾಂಚಿಕ್ ಟ್ರ್ಯಾಕ್ ಆಗಿರಲಿದೆ.

ಶಿವಣ್ಣ ಡಿಫರೆಂಡ್ ಆಗಿ ಮೂಡಿ ಬರಲು ಚಿತ್ರತಂಡ ಬಯಸಿತ್ತು. ಚಿತ್ರದ ಸಾಂಗ್‌ಗೆ ಶಿವರಾಜ್‌ಕುಮಾರ್ ನೃತ್ಯ ನಿರ್ದೇಶನ ಮಾಡಲು ನಿರ್ಧರಿಸಿದ್ದರು. ಅದರಂತೆ ಅವರು ಫ್ರೆಶ್ ಆಗಿ ಕೆಲಸ ಮಾಡಲಿದ್ದಾರೆ. ಇದರಲ್ಲಿ ಯಾವುದೇ ಡೌಟ್ ಇಲ್ಲ. ಶಿವಣ್ಣ ಕೋರಿಯೋಗ್ರಾಫ್ ಮಾಡುತ್ತಿರುವುದು ಅಭಿಮಾನಿಗಳಿಗೆ ಸಂತಸ ತರಲಿದೆ ಎಂದು ಚಿತ್ರದ ನಿರ್ದೇಶಕ ನಾಗೇಂದ್ರ ಬಾಬು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ