ಬಿಗ್ ಹಿಟ್ ಗಾಗಿ ಕಾಯುತ್ತಿರುವ ಸ್ಟಾರ್ ನಟರ ಲಿಸ್ಟ್

ಶನಿವಾರ, 29 ಅಕ್ಟೋಬರ್ 2022 (08:20 IST)
WD
ಬೆಂಗಳೂರು: ಬಾಲಿವುಡ್, ಟಾಲಿವುಡ್ ನ ಘಟಾನುಘಟಿ ಸ್ಟಾರ್ ಗಳು ಸೋಲಿನಿಂದ ಕಂಗೆಟ್ಟಿದ್ದು, ಬಿಗ್ ಹಿಟ್ ಗಾಗಿ ಕಾಯುತ್ತಿದ್ದಾರೆ. ಅಂತಹ ತಾರೆಯರ ಲಿಸ್ಟ್ ಇಲ್ಲಿದೆ.

ಸಲ್ಮಾನ್ ಖಾನ್: ದಬಾಂಗ್ 3, ಅಂತಿಮ್ ಸಿನಿಮಾ ಸೋಲಿನ ಹತಾಶೆಯಲ್ಲಿರುವ ಸಲ್ಮಾನ್ ಬ್ರೇಕ್ ಗಾಗಿ ಕಾಯುತ್ತಿದ್ದಾರೆ.
ಅಮೀರ್ ಖಾನ್: ಲಾಲ್ ಸಿಂಗ್ ಛಡ್ಡಾ ಸೋಲು ಅಮೀರ್ ಖಾನ್ ಗೆ ತೀವ್ರ ಹತಾಶೆ ತಂದಿದೆ.
ಪ್ರಭಾಸ್: ಬಾಹುಬಲಿ ಬಳಿಕ ಪ್ರಭಾಸ್ ಯಾವ ಸಿನಿಮಾಗಳೂ ಹೇಳಿಕೊಳ್ಳುವಷ್ಟು ಯಶಸ್ಸು ಮಾಡಿಲ್ಲ. ಸಾಹೋ, ರಾಧೇ ಶ್ಯಾಮ್ ಎರಡೂ ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿತ್ತು. ಇದೀಗ ಸಲಾರ್ ಮತ್ತು ಆದಿಪುರುಷ್ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ.
ಅಕ್ಷಯ್ ಕುಮಾರ್: ಪೃಥ್ವಿರಾಜ್, ರಾಮಸೇತು ಅಕ್ಷಯ್ ಗೆ ದೊಡ್ಡಮಟ್ಟಿನ ಯಶಸ್ಸು ಕೊಟ್ಟಿಲ್ಲ. ಮೊದಲಿನಂತೆ ಬಾಕ್ಸ್ ಆಫೀಸ್ ರೂಲ್ ಮಾಡಲು ಕಾಯುತ್ತಿದ್ದಾರೆ.
ಚಿರಂಜೀವಿ: ಆಚಾರ್ಯ, ಗಾಡ್ ಫಾದರ್ ಸೋಲು ಮೆಗಾ ಸ್ಟಾರ್ ಚಿರಂಜೀವಿಗೆ ಆಘಾತ ಕೊಟ್ಟಿದೆ.
ಮೋಹನ್ ಲಾಲ್: ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಮಾನ್ ಸ್ಟರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಬಹುದು ಎಂದು ನಿರೀಕ್ಷಿಸಿದ್ದರು. ಆದರೆ ಅದು ಸುಳ್ಳಾಗಿದೆ.
ನಾಗಚೈತನ್ಯ: ಸಮಂತಾ ಜೊತೆಗೆ ದಾಂಪತ್ಯ ಜೀವನ ಕೊನೆ ಹಾಡಿದ ಬಳಿಕ ನಾಗಚೈತನ್ಯಗೆ ಅದೃಷ್ಟವೂ ಕೈಕೊಟ್ಟಿದೆ. ಕಳೆದ ಎರಡು ಸಿನಿಮಾಗಳು ಲಾಸ್ ಆಗಿರುವುದರಿಂದ ನಾಗಚೈತನ್ಯಗೆ ಈಗ ಬ್ರೇಕ್ ಒಂದು ಬೇಕಾಗಿದೆ.


-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ