ನಾಳೆ ಸುಲ್ತಾನ್ ಚಿತ್ರದ 'ಬೇಬಿ ಕೋ ಬಾಸ್ ಪಸಂದ್ ಹೇ' ಹಾಡು ರಿಲೀಸ್

ಮಂಗಳವಾರ, 31 ಮೇ 2016 (10:39 IST)
ಸಲ್ಮಾನ್ ಖಾನ್ ಹಾಗೂ ಅನುಷ್ಕಾ ಶರ್ಮಾ ಅಭಿನಯದ 'ಬೇಬಿ ಕೋ ಬಾಸ್ ಪಸಂದ್ ಹೇ' ಸಾಂಗ್ ನಾಳೆ ರಿಲೀಸ್ ಆಗಲಿದೆ. ಈ ಹಿನ್ನಲೆಯಲ್ಲಿ ಚಿತ್ರಕ್ಕೆ ಸಂಬಂಧಪಟ್ಟಂತೆ ಕೆಲ ಅಂಶಗಳನ್ನು ಇಲ್ಲಿ ನೋಡಬಹುದು.
ಸಲ್ಮಾನ್ ಸುಲ್ತಾನ್ ಚಿತ್ರ ಬಿಡುಗಡೆಗಾಗಿ ತುಂಬಾ ಎಕ್ಸೈಟ್ ಆಗಿದ್ದಾರೆ. ಇನ್ನೂ ಸುಲ್ತಾನ್ ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿತ್ತು..

ನಾಳೆ 'ಬೇಬಿ ಕೋ ಬಾಸ್ ಪಸಂದ್ ಹೇ' ಹಾಡಿನ ಫಸ್ಟ್ ಲುಕ್ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳಲ್ಲಿ ಚಿತ್ರದ ಸಾಂಗ್ ಕುರಿತು ನಿರೀಕ್ಷೆ ಹೆಚ್ಚಿದೆ.
 
ಚಿತ್ರದ ಸಾಂಗ್ ನೋಡಿದ್ರೆ ಸಲ್ಮಾನ್ ಹಾಗೂ ಅನುಷ್ಕಾ ಶರ್ಮಾರ ಡ್ಯಾನ್ಸಿಂಗ್ ಸ್ಕಿಲ್ಸ್ ಅದ್ಭುತವಾಗಿ ಮೂಡಿ ಬಂದಿದೆ... ಬೇಬಿ ಕೋ ಬಾಸ್ ಪಸಂದ್ ಹೇ ಚಿತ್ರದ ಸಾಂಗ್‌ನ್ನು ವಿಶಾಲ್ ದದಲಾನಿ ಹಾಡಿದ್ದಾರೆ.

ಅಲ್ಲದೇ ಸಾಂಗ್ ಕಂಪೋಸ್ ಮಾಡಿದ್ದಾರೆ ವಿಶಾಲ್ ದಾದಲಾನಿ ಹಾಗೂ ಶೇಖರ್ ರವಿಜಾನಿ.. ಸುಲ್ತಾನ್ ಚಿತ್ರದ ಈ ಹಾಡು ಕೇಳುಗರನ್ನು ಮೋಡಿ ಮಾಡುವುದಂತು ಸುಳ್ಳಲ್ಲ.. ಅದಕ್ಕಾಗಿ ನೀವೂ ನಾಳೆವರೆಗೂ ಕಾಯಲೇಬೇಕು..

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ