ಅಮೀರ್ ಖಾನ್ ಆಯೋಜಿಸಿದ್ದ ಪಾರ್ಟಿಯಲ್ಲಿ ಸನ್ನಿ ಲಿಯೋನ್?

ಗುರುವಾರ, 31 ಮಾರ್ಚ್ 2016 (13:17 IST)
ಬಾಲಿವುಡ್ ನಟಿ ಸನ್ನಿ ಲಿಯೋನ್ ಅಮೀರ್ ಖಾನ್ ಮನೆಯಲ್ಲಿ ಆಯೋಜಿಸಲಾಗಿದ್ದ ಪಾರ್ಟಿಯಲ್ಲಿ ಹಾಜರಿದ್ದರು. ಇವರ ಜತೆಗೆ ಹಬ್ಬಿ ಡೇನಿಯಲ್ ಕೂಡ ಹಾಜರಿದಿದ್ದು ಕಂಡು ಬಂತು. 
ಸನ್ನಿ ಲಿಯೋನ್ ಸೂಪರ್ ಸ್ಟಾರ್ ಅಮಿರ್ ಖಾನ್ ಮನೆಯಲ್ಲಿ ಆಯೋಜಿಸಲಾಗಿದ್ದ ಪಾರ್ಟಿಯಲ್ಲಿ ಎಲ್ಲರ ಗಮನ ಸೆಳೆದರು. ಸನ್ನಿ ಜತೆಗೆ ಹಬ್ಬಿ ಡೇನಿಯಲ್ ವೆಬ್ಬರ್ ಕೂಡ ಪಾರ್ಟಿ ವೇಳೆ ಜತೆಗಿದ್ದರು. ಅಲ್ಲದೇ ಅಮಿರ್ ಖಾನ್ ಆಯೋಜಿಸಿದ್ದ ಪಾರ್ಟಿಯಲ್ಲಿ ರಿತೇಶ್ ದೇಶಮುಖ್, ರಾಜಕುಮಾರ್ ಹಿರಾನಿ ಕೂಡ ಬಂದಿದ್ದರು. 
 
ಇತ್ತೀಚೆಗೆ ಸನ್ನಿ ಲಿಯೋನ್ ಶಾರೂಖ್ ಖಾನ್ ಅಭಿನಯದ ರಾಯಿಸ್ ಸಿನಿಮಾದಲ್ಲಿ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇದೀಗ ಶಾರೂಖ್ ಖಾನ್ ಜತೆ ಅಭಿನಯಿಸಿದ್ದು ಆದ್ಮೇಲೆ ಸನ್ನಿ ಮುಂದಿನ ದಿನಗಳಲ್ಲಿ ಅಮಿರ್ ಖಾನ್ ಜತೆಗೆ ನಟಿಸಲಿದ್ದಾರಾ? ಎಂಬ ಮಾತುಗಳು ಕೇಳಿ ಬರುತ್ತಿವೆ. 
 

ವೆಬ್ದುನಿಯಾವನ್ನು ಓದಿ