ಇನ್ನು ಶುರುವಾಗಲಿದೆ ಸನ್ನಿ ಲಿಯೋನ್ ಇಮೋಜಿಗಳ ಹವಾ

ಶನಿವಾರ, 4 ಮಾರ್ಚ್ 2017 (11:06 IST)
ಇತ್ತೀಚೆಗೆ ಬಾಲಿವುಡ್ ನಟಿ ಸೋನಂ ಕಪೂರ್ ಸ್ವಂತ ಇಮೋಜಿಗಳನ್ನು ಬಿಡುಗಡೆ ಮಾಡಿದ್ದರು. ಈಗ ಸೋನಂ ಹಾದಿಯಲ್ಲಿ ಸನ್ನಿ ಲಿಯೋನ್ ಹೆಜ್ಜೆ ಹಾಕಿದ್ದಾರೆ. ಶೀಘ್ರದಲ್ಲೇ ಸನ್ನಿ ಸಹ ತನ್ನ ಸ್ವಂತ ಇಮೋಜಿಗಳನ್ನು ಬಿಡುಗಡೆ ಮಾಡ್ದುತ್ತಿದ್ದಾರೆ.
 
ಸೋನಂ ಇಮೋಜಿಗಳು ಆಪ್‌ಗೆ ಮಾತ್ರ ಸೀಮಿತವಾಗಿವೆ. ಆದರೆ ಸನ್ನಿ ಇಮೋಜಿಗಳು ಮಾತ್ರ ಎಲ್ಲಾ ಮೆಸೇಜಿಂಗ್ ಆಪ್‌ಗಳಲ್ಲೂ ಲಭ್ಯವಾಗಲಿವೆ. ಈ ಕುರಿತು ಸನ್ನಿ ಕಂಪೆನಿ ಜತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಸನ್ನಿ ಇಮೋಜಿಗಳನ್ನು ಇಂಡೋನೇಷಿಯಾದ ಡಿಸೈನರ್‌ಗಳು ಹೈಕ್ವಾಲಿಟಿ ವಿನ್ಯಾಸದೊಂದಿಗೆ ರೂಪಿಸಿದ್ದಾರೆ. ಆದರೆ ಸೋನಂ ಇಮೋಜಿಗಳನ್ನು ಪ್ರಿಸ್ಮಾ ಆಪ್‌ನಲ್ಲಿ ಫೋಟೋಶಾಪ್ ಮಾಡಿದಂತಿವೆ.
 
ಸೋನಂದು ಸಿನಿಮಾಗೆ ಸಂಬಂಧಿಸಿದ ಇಮೋಜಿಗಳಾದರೆ ಸನ್ನಿ ಇಮೋಜಿಗಳಲ್ಲಿ ಮಾಹಿತಿ ಇರುತ್ತದೆ. "ಸನ್ನಿಗೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಆಕೆ ನಮ್ಮ ಕಂಪೆನಿಗೆ ಸೂಕ್ತವಾಗುತ್ತಾರೆ. ಜಗತ್ತಿನಾದ್ಯಂತ ಯುವಜನತೆ ಏಳು ಬಿಲಿಯನ್ ಇಮೋಜಿಗಳನ್ನು ಬಳಸುತ್ತಿದ್ದಾರೆ. ಸದ್ಯಕ್ಕೆ ಇಮೋಜಿಗಳ ಆಪ್ ಉಚಿತವಾಗಿ ಲಭ್ಯವಾಗುತ್ತಿದೆ. ಶೀಘ್ರದಲ್ಲೇ ಇದಕ್ಕೆ ಬೆಲೆ ನಿರ್ಧರಿಸಲಾಗುತ್ತದೆ" ಎಂದು ಇಮೋಜಿ ಸಹ ವ್ಯವಸ್ಥಾಪಕಿ ಮನನ್ ಮಹೇಶ್ವರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ