ಹಡೆಯದೇ ಮಗು ಬೇಕು ಅಂತಿದ್ದಾಳೆ ಸನ್ನಿ..!

ಗುರುವಾರ, 20 ಜುಲೈ 2017 (17:59 IST)
ಬಾಲಿವುಡ್ ಮಮ್ಮಿಗಳಿಂದ ಸ್ಫೂರ್ತಿ ಪಡೆದಿರುವ ಸನ್ನಿ ಲಿಯೋನ್ ಮಗುವನ್ನ ಪಡೆಯಲು ನಿರ್ಧರಿಸಿದ್ದಾರಾ..? ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ಸುಳಿವು ನೀಡಿರುವ ಏಕ್ ಪಹೇಲಿ ಲೀಲಾ ಬಾಡಿಗೆ ತಾಯಿ ಅಥವಾ ದತ್ತು ಪಡೆಯುವ ಸೂಚನೆ ನೀಡಿದ್ದಾರೆ.
 

ಎಂಟಿವಿ ಶೋವೊಂದರ ಪ್ರೊಮೋಶನ್`ನಲ್ಲಿ ಬ್ಯುಸಿಯಾಗಿರುವ ಸನ್ನಿ ಲಿಯೋನ್ ಈ ಸಂದರ್ಭ ನಾನು ಮಗುವನ್ನ ಹಡೆಯುವುದು ನಿಜವಾಗಿಯೂ ಕಷ್ಟ. ನನ್ನ ಜೀವನದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದುಹೋಗಿವೆ. ಯಾರಿಗೆ ಗೊತ್ತು. ಒಂದು ದಿನ ನಾನೂ ಮಗುವಿನ ಕೈ ಹಿಡಿದುಕೊಂಡು ಬರುತ್ತೇನೇನೋ ಎಂದಿದ್ದಾರೆ.

ಸನ್ನಿಯ ಈ ಮಾತನ್ನ ಕೇಳಿ ಗಾಬರಿಯಾದ ಸಂದರ್ಶಕರು ಮಾತು ಮುಂದುವರೆಸಿದಾಗ, ಬಾಡಿಗೆ ತಾಯಿಯಿಂದ ಮಗು ಪಡೆಯುವ ಬಗ್ಗೆ ಈಗಲೇ ಖಚಿತವಾಗಿ ಹೇಳಲಾರೆ. ದೇವರ ಬಗ್ಗೆ ನನಗೆ ನಂಬಿಕೆ ಇದೆ. ದೇವರು ನನ್ನ ಜೀವನದಲ್ಲಿ ವಿಭಿನ್ನ ಪರಿಸ್ಥಿತಿ ತಂದೊಡ್ಡಿದರೆ ನೋಡೋನ ಎಂದಿದ್ಧಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ